ಮೈಸೂರು: ಆಭರಣ ಮಾಡಿಕೊಡುವುದಾಗಿ ನಂಬಿಸಿ ನೌಕರನೊಬ್ಬ 900 ಗ್ರಾಂ ಚಿನ್ನದ ಗಟ್ಟಿ ಪಡೆದು ನಾಪತ್ತೆಯಾಗಿರುವ ಘಟನೆ
ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚಿನ್ನದ ಗಟ್ಟಿ ಪಡೆದ ನೌಕರ ಹಾಗೂ ಕೆಲಸಕ್ಕೆ ಶಿಫಾರಸು ಮಾಡಿದ ಇಬ್ಬರು ವ್ಯಕ್ತಿಗಳ ಮೇಲೆ
ಮಂಡಿ ಪೊಲೀಸ್ ಠಾಣೆಯಲ್ಲಿ
ಮಾಲೀಕ ಔಲಿಯಾ ಆಲಿ ಶೇಕ್ ವಂಚನೆ ಪ್ರಕರಣ ದಾಖಲಿಸಿದ್ದಾರೆ.
ಚಿನ್ನದಗಟ್ಟಿ ಪಡೆದ ಪಶ್ಚಿಮ ಬಂಗಾಳದ ಸುದೀಪ್ ಮೇಟಿ @ ಸುಜಯ್ ಹಾಗೂ ಕೆಲಸಕ್ಕೆ ಶಿಫಾರಸು ಮಾಡಿದ ಪಶ್ಚಿಮ ಬಂಗಾಳದ ಗಣೇಶ್ ಗುಚಿತ್ ಎಂಬುವರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಪಶ್ಚಿಮ ಬಂಗಾಳದವರೇ ಆದ ಔಲಿಯಾ ಆಲಿ ಶೇಕ್ ಅವರು ಕಳೆದ 18 ವರ್ಷಗಳಿಂದ ಮೈಸೂರಿನಲ್ಲಿ ಗೋಲ್ಡ್ ಸ್ಮಿತ್ ಆಗಿದ್ದಾರೆ.
ಕೆಲವು ತಿಂಗಳ ಹಿಂದೆ ಪರಿಚಯಸ್ಥರಾದ ಗಣೇಶ್ ಗುಚಿತ್ ಅವರು ಸುದೀಪ್ ಮೇಟಿಯನ್ನ ಶಿಫಾರಸು ಮಾಡಿ ಔಲಿಯಾ ಆಲಿ ಶೇಖ್ ಬಳಿ ಕೆಲಸಕ್ಕೆ ಸೇರಿಸಿದ್ದಾರೆ.
ಚಿನ್ನಾಭರಣ ಮಾಡಲು ಸುದೀಪ್ ಮೇಟಿಗೆ ಔಲಿಯಾ ಶೇಕ್ ಅವರು 900 ಗ್ರಾಂ ಚಿನ್ನದ ಗಟ್ಟಿ ನೀಡಿದ್ದಾರೆ.
ಆದರೆ ಆತ ನಿಗದಿತ ಸಮಯದಲ್ಲಿ ಆಭರಣ ತಂದು ಕೊಟ್ಟಿಲ್ಲ.ಸಂಪರ್ಕಿಸಲು ಪ್ರಯತ್ನಿಸಿದಾಗ ಸುದೀಪ್ ಮೇಟಿ ಮೊಬೈಲ್ ಸ್ವಿಚ್ ಆಫ್ ಆಗಿದೆ.
ನಂತರ ಗಣೇಶ್ ಗುಚೀತ್ ಗೆ ಸಂಪರ್ಕಿಸಲು ಪ್ರಯತ್ನಿಸಿದಾಗ ಆತನ ಮೊಬೈಲ್ ಸಹ ಸ್ವಿಚ್ ಆಫ್ ಆಗಿದೆ.
ಹಾಗಾಗಿ ತಾವು ಮೋಸ ಹೋಗಿರುವುದು ಗೊತ್ತಾಗಿ ಇಬ್ಬರೂ ಸಂಚು ರೂಪಿಸಿ ವಂಚಿಸಿದ್ದಾರೆಂದು ಆರೋಪಿಸಿ ಔಲಿಯಾ ಆಲಿ ಶೇಕ್ ಅವರು ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
