ಮೈಸೂರು: ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ಪಾಲಿಸುವಲ್ಲಿ ಯುವ ಸಮೂಹ ಮುಂದಾಗಬೇಕು ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಕರೆ ನೀಡಿದರು.
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಮೈಸೂರು ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ಉತ್ತಮ ಶಿಕ್ಷಣ ಪಡೆದು ದೇಶದ ಭವಿಷ್ಯದ ಆಸ್ಥಿಯಾಗಿ ಯುವಕರು ನಿರ್ಮಾಣವಾಗಬೇಕು, ದುಷ್ಚಟಗಳಿಗೆ ಬಲಿಯಾಗದೆ ಶಿಸ್ತು, ಸಮಯ ಪರಿಪಾಲನೆ ರೂಡಿಸಿಕೊಳ್ಳಬೇಕು, ಮಹಾತ್ಮ ಗಾಂಧಿ ಮತ್ತು ಸ್ವಾಮಿ ವಿವೇಕಾನಂದರ ಚಿಂತನೆ ಯುವಭಾರತ ಕಟ್ಟುವ ಕಡೆ ಪ್ರಮುಖವಾಗಿತ್ತು ಸ್ವದೇಶಿ ವಸ್ತುಗಳ ಬಳಕೆ, ಅವರು ಕೊಟ್ಟಂತಹ ಘೋಷಾವಾಕ್ಯ ಏಳಿ ಏದ್ದೇಳಿ ಗುರಿ ಮುಟ್ಟುವವರೆಗೂ ನಿಲ್ಲದಿರಿ ಎನ್ನುವುದು ಯುವಸಮೂಹಕ್ಕೆ ಸ್ಪೂರ್ಥಿಯಾಗಿದೆ ಎಂದು ಅಯೂಬ್ ಖಾನ್ ಹೇಳಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಟಿ. ಗುರುರಾಜ್, ನಗರಪಾಲಿಕೆ ಮಾಜಿ ಸದಸ್ಯರಾದ ಸಯ್ಯದ್ ಹಸ್ರದ್ ಉಲ್ಲಾ, ಸುಹೇಲ್ ಬೇಗ್, ರಘುರಾಜೇ ಅರಸ್, ಯುವ ಮುಖಂಡರಾದ ಜಿ. ರಾಘವೇಂದ್ರ, ಗಾಂಧಿನಗರ ರಾಕೇಶ್, ಎಸ್.ಎನ್ ರಾಜೇಶ್, ನಿರೂಪಕ ಅಜಯ್ ಶಾಸ್ತ್ರಿ, ನಸ್ರುಲ್ಲಾ, ಒಂಟಿಕೊಪ್ಪಲು ಗುರುರಾಜ್, ಕೈಸರ್ ಅಹಮದ್, ತಬ್ರೇಜ್ ಪಾಷಾ, ನಾಗೇಶ್, ಮಹೇಂದ್ರ ಮತ್ತಿತರರು ಹಾಜರಿದ್ದರು.
