ಮೈಸೂರು: ಮೈಸೂರು ನಗರಪಾಲಿಕೆಯಲ್ಲಿ ಗೈರು ಹಾಜರಾಗಿದ್ದ ಪೌರಕಾರ್ಮಿಕರಿಗೆ ಹೆಚ್ಚವರಿ ವೇತನ ಮಂಜೂರು ಮಾಡಿ ಲಕ್ಷಾಂತರ ರೂ. ಭ್ರಷ್ಟಾಚಾರ ಮಾಡಿದ ಆರೋಪದ ಮೇರೆಗೆ ಮೂವರು ಮಹಿಳಾ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ.
ನಗರಪಾಲಿಕೆ ಆರೋಗ್ಯ ಶಾಖೆಯ ಪ್ರಥಮ ದರ್ಜೆ ಸಹಾಯಕಿಯರಾದ ಎಂ.ಪುಷ್ಪಾವತಿ, ಕೆ.ಎಲ್.ಸಿ. ಪಾಪ ಮತ್ತು ದ್ವಿತೀಯ ದರ್ಜೆ ಸಹಾಯಕಿ ಅನಿತಾ ಸಿ.ಹೆಚ್. ಎಂಬವರನ್ನು ಅಮಾನತು ಪಡಿಸಲಾಗಿದೆ.ಇವರಲ್ಲಿ ಇಬ್ಬರು ಪ್ರಥಮ ದರ್ಜೆ ಸಹಾಯಕರು, ಒಬ್ಬರು ದ್ವಿತೀಯ ದರ್ಜೆ ಸಹಾಯಕರು.
ನಗರಪಾಲಿಕೆ ವ್ಯಾಪ್ತಿಗೆ ಬರುವ ಪೌರಕಾರ್ಮಿಕರಿಗೆ 2025ರ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಗೈರು ಹಾಜರಾತಿಯ ದಿನಕ್ಕೂ ವೇತನ ನೀಡಿರುವಂತೆ ದಾಖಲೆ ಸೃಷ್ಟಿಸಿ 13,58, 575 ರೂ.ಗಳನ್ನು ವಂಚಿಸಿರುವುದು ತನಿಖೆಯಿಂದ ಸಾಬೀತಾದ ಹಿನ್ನಲೆಯಲ್ಲಿ ಈ ಮೂವರನ್ನು ಅಮಾನತು ಪಡಿಸಿ ನಗರಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸಿಫ್ ಆದೇಶ ಹೊರಡಿಸಿದ್ದಾರೆ.
