ಮೈಸೂರು: ಯುವಕರಿಗೆ ಧೈರ್ಯ, ಸಾಹಸ ಹಾಗೂ ಅಭಿಮಾನದ ಸಂಕೇತವಾಗಿರುವ ಶಿವಾಜಿ ಮಹಾರಾಜರು ಆದರ್ಶಪ್ರಾಯರಾಗಿದ್ದಾರೆ ಎಂದು ನಗರ ಪಾಲಿಕೆ ಮಾಜಿ ಸದ್ಯಸ್ಯ ಪ್ರಶಾಂತ್ ಗೌಡ ಹೇಳಿದರು.
ಛತ್ರಪತಿ ಶಿವಾಜಿ ಮಹಾರಾಜ್ ರ 396 ನೇ ಜಯಂತಿ ಅಂಗವಾಗಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಶಿವರಾಂ ಪೇಟೆಯಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಇಂದಿನ ಯುವಪೀಳಿಗೆ ಛತ್ರಪತಿಯಂತೆಯೇ ಸಾಹಸ, ಧೈರ್ಯ ಮತ್ತು ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ದೇಶ ಕಂಡ ಅಪ್ರತಿಮ ಹೋರಾಟಗಾರ ಶಿವಾಜಿ, ಅವರು ಅನೇಕ ವೈರಿಗಳನ್ನು ಹಿಮ್ಮೆಟ್ಟಿಸಿ ಸಾಮ್ರಾಜ್ಯ ಕಟ್ಟಿ ಹಿಂದುತ್ವ ಉಳಿಸಿ ಹಿಂದೂಗಳ ಹೃದಯ ಸಾಮ್ರಾಟವಾಗಿದ್ದಾರೆ ಎಂದು ಬಣ್ಣಿಸಿದರು.
ಯುದ್ಧ ಕಲೆಗಳನ್ನು ಕರಗತ ಮಾಡಿಕೊಂಡು ಏಕಾಂಗಿಯಾಗಿ ಹೋರಾಟ ಮಾಡಿದವರು. ಸೈನ್ಯ ಕಟ್ಟಿಕೊಂಡು ದೊಡ್ಡ ದೊಡ್ಡ ಸೈನ್ಯ ಹೊಂದಿದ್ದ ದೇಶ ವಿರೋಧಿಗಳಿಗೆ ಸೋಲಿನ ರುಚಿ ತೋರಿಸಿದವರು ಎಂದು ಸ್ಮರಿಸಿದರು.
ಮೈಸೂರು ರಕ್ಷಣಾ ವೇದಿಕೆ ಅಧ್ಯಕ್ಷ ಮೈಕಾ ಪ್ರೇಮ್ ಕುಮಾರ್ ಮಾತನಾಡಿ,
ಜೀಜಾಬಾಯಿ ಬಾಲ್ಯದಲ್ಲಿಯೇ ಶಿವಾಜಿಗೆ ಧಾರ್ಮಿಕ ಸಂಸ್ಕಾರದೊಂದಿಗೆ ಯುದ್ಧ ಕಲೆಗಳನ್ನು ಕರಗತ ಮಾಡಿಸಿದ್ದರು. ಇದರಿಂದಾಗಿ ಅವರು ಛತ್ರಪತಿಯಾಗಿ ಬಾನೆತ್ತರಕ್ಕೆ ಬೆಳೆದು ಅಜರಾಮರಾಗಿದ್ದಾರೆ. ಹಲವು ಕೋಟೆಗಳನ್ನು ನೀಡಿದ್ದಾರೆ ಅವರು ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕು ಎಂದು ಹೇಳಿದರು.
ಕರ್ನಾಟಕ ಹಿತರಕ್ಷಣ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್ ಮಾತನಾಡಿ, ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಅವಿರತವಾಗಿ ಶ್ರಮಿಸಿದ ಮಹಾನ್ ನಾಯಕ, ಪ್ರಜಾ ರಕ್ಷಕ, ರಾಷ್ಟ್ರ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಅಧರ್ಮವನ್ನಳಿಸಿ ಧರ್ಮ ರಾಜ್ಯ ಸ್ಥಾಪಿಸಿದ ಯುಗಪುರುಷ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜನ್ಮದಿನದಂದು ಅವರಿಗೆ ಶತ ಕೋಟಿ ನಮನಗಳು ಎಂದು ತಿಳಿಸಿದರು.
ಶಿವಾಜಿ ಮಹಾರಾಜರ ಶೌರ್ಯ, ಪರಾಕ್ರಮಗಳು, ದಿಟ್ಟ ಹೋರಾಟದ ಹಂಬಲ ಹಾಗೂ ಅವರ ಸಾಧನೆಗಳು ಸದಾಕಾಲ ಅವಿಸ್ಮರಣೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ತ್ರಿಪುರ ಬೈರವಿ ಮಠಾಧಿಪತಿಗಳಾದ ಡಾ ಕೃಷ್ ಮೋಹನ್ ನಂದ ಗಿರಿ ಗೋ ಸ್ವಾಮೀಜಿ,ಕೆಎಂಪಿ ಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಎಸ್ ಎನ್ ರಾಜೇಶ್, ಬೈರತಿ ಲಿಂಗರಾಜು, ಅನೋಜ್ ಸರಸ್ವತ, ಹರೀಶ್ ಗೌಡ, ಟಿ ಎಸ್ ಅರುಣ್, ಅರಿವು ಸಂಸ್ಥೆಯ ಅಧ್ಯಕ್ಷರಾದ ಶ್ರೀಕಾಂತ್ ಕಶಪ್, ವಿನೋದ್ ಅರಸ್,ಸುಚಿಂದ್ರ,
ಪ್ರಮೋದ್ ಗೌಡ,ಗುರುರಾಜ್ ಶೆಟ್ಟಿ,ಸಚಿನ್ ನಾಯಕ್ ಮತ್ತಿತರರು ಹಾಜರಿದ್ದರು.
