ಬೆಂಗಳೂರು: ಆಟೊ ಚಾಲಕನನ್ನು ಕೊಲೆ ಮಾಡಿದ್ದ ಆರೋಪಗಳನ್ನು ಬಂಧಿಸುವಲ್ಲಿ
ಕೆ.ಪಿ ಅಗ್ರಹಾರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಒಡಿಶಾದ ಮೂವರು ಆರೋಪಿಗಳನ್ನು ಕೆ.ಪಿ ಅಗ್ರಹಾರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಸೌರಭ್ ಬಿಸ್ವಾಲ್ (25), ಸಾಗರ್ ದಾಸ್ (24), ಸುಬ್ರಕಾಂತ್ ಭುವಿಯಾ (35) ಬಂಧಿತ ಆರೋಪಿಗಳು.
ಕೆ.ಪಿ.ಅಗ್ರಹಾರದ ನಿವಾಸಿ ಆಟೊ ಚಾಲಕ ರೇಚಣ್ಣ (36) ಎಂಬಾತನನ್ನು ಒಡಿಶಾದ ಮೂವರು ಆರೋಪಿಗಳು ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದರು.
ಈ ಮೂವರು ಆರೋಪಿಗಳು ಕೆ.ಪಿ.ಅಗ್ರಹಾರದಲ್ಲಿ ನೆಲಸಿದ್ದರು,
ಕೊಲೆಯಾದ ಆಟೊ ಚಾಲಕ ರೇಚಣ್ಣ ಅವರ ಮನೆ ಅಕ್ಕಪಕ್ಕದಲ್ಲೇ ಆರೋಪಿಗಳು ವಾಸವಾಗಿದ್ದರು.
ಡಿ.31ರಂದು ರಾತ್ರಿ 11.30ರಲ್ಲಿ ಮದ್ಯಪಾನ ಮಾಡಿದ್ದ ಆರೋಪಿಗಳು ರೇಚಣ್ಣ ಮನೆಯ ಬಾಗಿಲನ್ನು ತಟ್ಟಿದ್ದಾರೆ,ಆಗ ರೇಚಣ್ಣ ಕೋಪಗೊಂಡು ಆರೋಪಿಗಳ ಜೊತೆಗೆ ಜಗಳ ತೆಗೆದಿದ್ದಾರೆ.
ಜಗಳ ಜೋರಾಗಿ ಆರೋಪಿಗಳು ಚಾಕುವಿನಿಂದ ರೇಚಣ್ಣನ ಎದೆ, ಬೆನ್ನಿಗೆ ಇರಿದಿದ್ದರು.ಇದರಿಂದ ತೀವ್ರ ರಕ್ತಸ್ರಾವವಾಗಿ ರೇಚಣ್ಣ ಸ್ಥಳದಲ್ಲೇ ಮೃತಪಟ್ಟಿದ್ದ.
ಈ ಸಂಬಂಧ ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
