ಪಿರಿಯಾಪಟ್ಟಣ: ಪಿರಿಯಾಪಟ್ಟಣ ತಾಲೂಕು ಕೆಲ್ಲೂರು ಗ್ರಾಮದಲ್ಲಿ ಮೌರ್ಯ ಕಪ್ ಸೀಸನ್ 1 ಕ್ರಿಕೆಟ್ ಟೂರ್ನಮೆಂಟ್ ನಡೆಯಿತು.
ಈ ಪಂದ್ಯಾವಳಿಗೆ ರಾಜ್ಯ ಬ್ಲೂ ಇಂಡಿಯನ್ ಪಾರ್ಟಿಯ ರಾಜ್ಯ ಅಧ್ಯಕ್ಷರಾದ ರಾಜಶೇಖರ್ ದೊಡ್ಡಣ್ಣ ಮೌರ್ಯ ಅವರು ಧನ ಸಹಾಯದ ಮೂಲಕ ಮಾದರಿಯಾಗಿದ್ದಾರೆ.
ಈ ಕ್ರಿಕೆಟ್ ಟೂರ್ನಮೆಂಟ್ ಗೆ ಮೊದಲನೇ ಬಹುಮಾನಕ್ಕೆ 20,000 ಸಾವಿರ ರೂ ಗಳನ್ನು ಕೊಟ್ಟು ಯುವಕರಿಗೆ ಸ್ಪೂರ್ತಿ ತುಂಬಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನಲ್ಲಿ ಬಡವರಿಗೆ ಸಹಾಯಾ ರೂಪದಲ್ಲಿ ಎಲ್ಲಾ ಕೋಮಿನ ಜನತೆಗೆ ಸ್ಪೂರ್ತಿ ಕೊಡುವ ಮುಖಾಂತರ ರಾಜಶೇಖರ್ ದೊಡ್ಡಣ್ಣ ಮೌರ್ಯ ಅವರು ಜನರ ಮನಸ್ಸಿನಲ್ಲಿದ್ದಾರೆ.
ಕೆಲ್ಲೂರು ಗ್ರಾಮದ ಕ್ರಿಕೆಟ್ ಟೀಮಿನ ಯುವಕರು ರಾಜಶೇಖರ್ ದೊಡ್ಡಣ್ಣ ಮೌರ್ಯ ಅವರ ಅನುಪಸ್ಥಿತಿಯಲ್ಲಿ ಟೂರ್ನಮೆಂಟ್ ಗೆ ಧನಸಹಾಯ ಸಿಗಲು ಶ್ರಮಿಸಿದ ಪ್ರಿಯಾಪಟ್ಟಣ ತಾಲೂಕಿನ ಮಾಕೊಡು ಗ್ರಾಮ ಘಟಕದ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಬಸವರಾಜ್, ತಾಲೂಕು ಸಂಚಾಲಕ ಕೊಣಸೂರು ಶಿವರಾಜ್, ಅಂಬೇಡ್ಕರ್ ಸಂಘದ ವತಿಯಿಂದ ತಾತನಹಳ್ಳಿ ಕೃಷ್ಣಮೂರ್ತಿ ಅವರುಗಳಿಗೆ ಸನ್ಮಾನ ಮಾಡಿದರು.
ಈ ಮುಖಾಂತರ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟಿಸಿ ರಾಜಶೇಖರ್ ದೊಡಣ್ಣ ಮೌರ್ಯ ಅವರಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾದೇವ, ಸ್ವಾಮಿ ಗೌಡ, ದೇವಶೆಟ್ಟಿ, ಕೆಲ್ಲೂರು ಗ್ರಾಮದ ಮುಖಂಡರು ಮತ್ತು ಯುವಕರು ಭಾಗವಹಿಸಿದ್ದರು.
