ಮೈಸೂರು: ಈ ಬಾರಿಯ ದಸರಾ ಶ್ವಾನ ಪ್ರದರ್ಶನದಲ್ಲಿ ನಗರದ ಸಿದ್ದಾರ್ಥ ಬಡಾವಣೆಯ ಹಿತ್ ಹರನ್ ಅವರ ಟಾಯ್ಪೂಡಲ್ ತಳಿಯ ‘ಐರಿಸ್’ ಶ್ವಾನ ಪ್ರಥಮ ಸ್ಥಾನ ಗಳಿಸಿ ಗಮನ ಸೆಳೆದಿದೆ.
ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ದಸರಾ ಶ್ವಾನ ಪ್ರದರ್ಶನದಲ್ಲಿ ಪಾಲ್ಗೊಂಡು ಪ್ರಥಮ ಸ್ಥಾನ ಪಡೆಯುವ ಮೂಲಕ ಐರಿಸ್ ಅಪರೂಪದ ಸಾಧನೆ ಮಾಡಿದೆ.
ಯುರೋಪ್ ಮೂಲದ ಈ ಟಾಯ್ಪೂಡಲ್ ತಳಿಯ ಶ್ವಾನವನ್ನು ದೆಹಲಿಯ ಬ್ರೀಡರ್ ಮೂಲಕ ತರಿಸಿಕೊಳ್ಳಲಾಗಿದೆ.
ತನ್ನ ಬುದ್ಧಿವಂತಿಕೆ, ಚುರುಕುತನ ಹಾಗೂ ಆಕರ್ಷಕ ನೋಟದಿಂದ ಟಾಯ್ಪೂಡಲ್ ತಳಿಯ ಶ್ವಾನಗಳು ಜನಪ್ರಿಯವಾಗಿವೆ. ಸತತ ನಾಲ್ಕನೇ ಬಾರಿಯೂ ಪ್ರಶಸ್ತಿ ಗೆಲ್ಲುವ ಮೂಲಕ ಐರಿಸ್ ದಸರಾ ಶ್ವಾನ ಪ್ರದರ್ಶನದ ವಿಶೇಷ ಆಕರ್ಷಣೆಯಾಗಿದೆ.
