ಮೈಸೂರು: ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರಕ್ಕೆ 12 ವರ್ಷ ಸಂದಿರುವ ಖುಷಿಯಲ್ಲಿ ಬಿಜೆಪಿ ಚಾಮುಂಡೇಶ್ವರಿ ನಗರ ಮಂಡಲದಿಂದ ಮ್ಯಾರಥಾನ್ ಹಮ್ಮಿಕೊಳ್ಳಲಾಯಿತು.
ಮ್ಯಾರತಾನ್ ಗೆ ರಾಜ್ಯ ವಕ್ತಾರ ಎಂ.ಜಿ ಮಹೇಶ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು,ಭಾರತ ಆಹಾರ, ಔಷಧಿ, ಶಸ್ತ್ರಾಸ್ತ್ರಗಳಿಗಾಗಿ ಬೇಡುವ ದೇಶ, ಹಾವಾಡಿಗರ ದೇಶ ಎಂದು ಆಡಿಕೊಳ್ಳುತ್ತಿದ್ದ ಸಂದರ್ಭ ಒಂದಿತ್ತು, ಆದರೆ ಈಗ ಇತರೆ ದೇಶಗಳಿಗೆ ಕಷ್ಟದಲ್ಲಿರುವಾಗ ಆಹಾರ, ಔಷಧಿಗಳನ್ನು ಉಚಿತವಾಗಿ ನೀಡುವ ದೇಶವಾಗಿ ಮಾರ್ಪಟ್ಟಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮೇಕ್ ಇನ್ ಇಂಡಿಯಾ ಮೂಲಕ ಸ್ವದೇಶಿ ನಿರ್ಮಿತ ಶಸ್ತ್ರ, ಯಂತ್ರ ಸೇರಿದಂತೆ ಅಭಿವೃದ್ಧಿಯತ್ತ ದಾಪುಗಾಲಿಟ್ಟಿದೆ. ಬಡವರಿಗೆ ಅನಿಲ, ಜನಧನ್ ಬ್ಯಾಂಕ್ ಖಾತೆ ಮೂಲಕ ನೇರ ಸರ್ಕಾರದ ಸಹಾಯ ನಗದು ವರ್ಗಾವಣೆ, ಜಲಜೀವನ್ ಮಿಷನ್ ಮೂಲಕ ಮನೆ ಮನೆಗೂ ಕುಡಿಯುವ ನೀರು, ಸ್ವಚ್ಛ ಭಾರತ ಅಭಿಯಾನದಡಿ ಕೋಟ್ಯಾಂತರ ಮನೆಗಳಿಗೆ ಶೌಚಾಲಯ, ಹೀಗೆ ಮೂಲಭೂತ ಕೊರತೆಗಳನ್ನು ನೀಗಿಸಿ ಭಾರತೀಯರ ಜೀವನದ ಗುಣಮಟ್ಟವನ್ನು ಹೆಚ್ಚಿಸಿದ್ದಾರೆ.
ಎಕ್ಸ್ಪ್ರೆಸ್ ವೇ ಹೆದ್ದಾರಿಗಳು, ವಿಮಾನ ನಿಲ್ದಾಣಗಳು, ರೈಲ್ವೆ ಮಾರ್ಗಗಳು ವೇಗವಾಗಿ ಅಭಿವೃದ್ದಿಯಾಗುತ್ತಿವೆ,ಈ ಮೂಲಕ ಆರ್ಥಿಕತೆಗೆ ವೇಗ ನೀಡಿವೆ ಎಂದು ಮೋದಿಯವರ ಆಡಳಿತದ ಅಭಿವೃದ್ಧಿಯ ಬಗ್ಗೆ ವಿವರಿಸಿದರು.
ಡಿಜಿಟಲ್ ಕ್ರಾಂತಿ ಮೂಲಕ ಯುಪಿಐ ಹಣ ವರ್ಗಾವಣೆ ಜಗತ್ತಿಗೆ ಮಾದರಿಯಾಗಿದೆ. ಇನ್ನು ಕಾಶಿ, ಅಯೋಧ್ಯಾ, ಕೇದಾರ, ಉಜ್ಜಯಿನಿ, ಸೋಮನಾಥ, ಸಿಖ್ಖರ ಕರ್ತಾರ್ ಪುರ ಸೇರಿದಂತೆ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಆಸ್ತಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಇಂದು ನರೇಂದ್ರ ಮೋದಿಯವರು 3499 ದಿನ ಆಡಳಿತ ಮಾಡಿ ಸತತವಾಗಿ ಆಡಳಿತ ನಡೆಸಿದ ಚುನಾಯಿತ ಪ್ರಧಾನಮಂತ್ರಿ ಎಂಬ ಕೀರ್ತಿಗೆ ಭಾಜನರಾಗಿರುವುದು ಬಿಜೆಪಿ ಕಾರ್ಯಕರ್ತರು ಹಾಗೂ ಆಯ್ಕೆ ಮಾಡಿದ ಮತದಾರರಿಗೆ ಹೆಮ್ಮೆಯ ವಿಷಯವಾಗಿದೆ ಎಂದು ನುಡಿದರು.
ನಂತರ ಸ್ಥಳೀಯ ಗಣಪತಿ ದೇವಸ್ಥಾನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಅರ್ಚನೆ ಹಾಗೂ ಪೂಜೆ ನೆರವೇರಿಸಿ ಪ್ರಸಾದ ವಿತರಿಸಲಾಯಿತು.
ಇದೇ ವೇಳೆ ಕಾರ್ಯಕರ್ತರು ಹಾಗೂ ಸ್ಥಳೀಯ ನಾಗರಿಕರೊಂದಿಗೆ ಸರ್ಕಾರದ ಸಾಧನೆಗಳ ಬಗ್ಗೆ ಸಂವಾದ ನಡೆಸಲಾಯಿತು.
ರಾಮಕೃಷ್ಣನಗರದ ಕೆ ಬ್ಲಾಕಿನ ಆಲದ ಮರದ ಬಳಿ ಮ್ಯಾರಥಾನ್ ಪ್ರಾರಂಭಿಸಿ ಪ್ರಮುಖ ರಸ್ತೆಗಳಲ್ಲಿ ಸಾಗಿ ಪರಮಹಂಸ ವೃತ್ತದಲ್ಲಿ ಮುಕ್ತಾಯವಾಯಿತು.
ಚಾಮುಂಡೇಶ್ವರಿ ನಗರ ಮಂಡಲದ ಅಧ್ಯಕ್ಷರಾದ ರಾಕೇಶ್ ಭಟ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯರಾದ ಎಂ.ಕೆ ಶಂಕರ್, ಹೇಮಗಂಗಪ್ಪ, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಈರೇಗೌಡ, ಆರ್. ಸೋಮಶೇಖರ್, ಉಪಾಧ್ಯಕ್ಷರುಗಳಾದ ಬಿ.ಸಿ ಶಶಿಕಾಂತ್, ಶಿವು ಪಟೇಲ್, ಹೆಚ್.ಎಸ್ ಹಿರಿಯಣ್ಣ, ನಾಗರಾಜ ಜನ್ನು, ಎನ್. ಶುಭಶ್ರೀ, ರಾಮಕೃಷ್ಣಪ್ಪ, ವಾರ್ಡ್ ಅಧ್ಯಕ್ಷರಾದ ಶೇಖರ್, ಬಸವಣ್ಣ, ಮೋರ್ಚಾಗಳ ಪದಾಧಿಕಾರಿಗಳಾದ ಪುಟ್ಟಮ್ಮಣ್ಣಿ, ಜೆ. ರಂಗೇಶ್, ಸಾಗರ್ ಸಿಂಗ್, ರಾಜ ನಾಯಕ್, ರಾಹುಲ್, ಪ್ರೇಮಾ ಹೊಳ್ಳ, ವಸುಮತಿ, ಸಿ. ಲೋಕೇಶ್ ನಾಯಕ್, ಸಂಜಯ್ ಪ್ರಸನ್ನ, ಎಸ್. ಮಹೇಶ್ ಕುಮಾರ್, ಎಂ.ಜೆ ರಾಘವೇಂದ್ರ, ಜೀವ ಗೌಡ, ಅನಂತಪದ್ಮನಾಭ ಪ್ರಭು, ವಿಷ್ಣು ಮತ್ತಿತರ ಮುಖಂಡರು ಭಾಗವಹಿಸಿದ್ದರು.
