ಉಡುಪಿ: ಕಳೆದ ಎರಡು ವರ್ಷದಿಂದ ಉಡುಪಿ ಜಿಲ್ಲೆಯ ಶಂಕರಪುರ ಗ್ರಾಮದ ನೀಮಾ ಲೋಬೊ ಅವರು ಒಂದು ಹೆಜ್ಜೆ ರಕ್ತದಾನಗಳ ಬಳಗ ಜಿಲ್ಲಾ ಅಧ್ಯಕ್ಷರಾಗಿ ರಕ್ತದ ಅವಶ್ಯಕತೆ ಇರುವ ರೋಗಿಗಳಿಗೆ ರಕ್ತದಾನ ಮಾಡಿಸುತ್ತಾ ತಾವು ಕೂಡ ರಕ್ತದಾನ ಮಾಡುತ್ತಾ ಮಾದರಿಯಾಗಿದ್ದಾರೆ.
ಇಂದು ನೀಮಾ ಲೋಬೊ ಅವರ ಪತಿ ಡಾ ಜೋಸೆಫ್ ಲೋಬೊ ಅವರ ಹುಟ್ಟು ಹಬ್ಬ.ಹಾಗಾಗಿ ಅವರೂ ಕೂಡ ರಕ್ತದಾನ ಮಾಡಬೇಕೆಂಬ ಆಸೆಯಿಂದ ತಮ್ಮ ಧರ್ಮಪತ್ನಿ ಜೊತೆ ಹೋಗಿ ರಕ್ತದಾನ ಮಾಡಿ ಹುಟ್ಟುಹಬ್ಬಕ್ಕೆ ಅರ್ಥ ತಂದುಕೊಟ್ಟಿದ್ದಾರೆ.
ಹೀಗೆ ಪ್ರತಿಯೊಂದು ಕುಟುಂಬದ ಸದಸ್ಯರು ಈ ಒಂದು ಯೋಚನೆಯನ್ನು ಮಾಡಿದರೆ ರಕ್ತದ ಅವಶ್ಯಕತೆ ಇರುವ ರೋಗಿಗಳಿಗೆ ರಕ್ತದಾನ ಮಾಡುವ ಮೂಲಕ ಜೀವ ಉಳಿಸಬಹುದು.
ಡಾ ಜೋಸೆಫ್ ಲೋಬೊ ಮತ್ತು ನೀಮಾ ಲೋಬೊ ಅವರಿಗೆ ಒಂದು ಹೆಜ್ಜೆ ರಕ್ತದಾನಿಗಳ ಬಳಗ ಮತ್ತು ಚಿರಜೀವ ಸೇವಾ ಟ್ರಸ್ಟ್ ಹಾಗೂ ಪಿಜಿಆರ್ ಎಸ್ ಎಸ್ ಪಂಚಾಯತ್ ಗ್ರಾಮೀಣಾಭಿವೃದ್ಧಿ ರೈತರ ಸೇವಾ ಸಮಿತಿ- ನಿರಾಶ್ರಿತರು ಮತ್ತು ವೃದ್ಧರ ಬೃಂದಾವನದ ಅಧ್ಯಕ್ಷರು, ನಿರ್ದೇಶಕರು ಎಲ್ಲಾ ತಾಯಂದಿರ ಪರವಾಗಿ ಹುಟ್ಟು ಹಬ್ಬದ ಶುಭಾಶಯ ಕೋರಿ ಧನ್ಯವಾದ ಸಲ್ಲಿಸುತ್ತೇವೆ ಎಂದು ಚಿರಜೀವ ಸೇವಾ ಟ್ರಸ್ಟ್ ಮೈಸೂರು ಜಿಲ್ಲೆ ಹಾಗೂ ಒಂದು ಹೆಜ್ಜೆ ರಕ್ತದಾನಿ ಬಳಗದ
ಅಧ್ಯಕ್ಷ ರಕ್ತದಾನಿ ಮಂಜು ತಿಳಿಸಿದ್ದಾರೆ.
