ಮೈಸೂರು: ಕೆ.ಸಿ ಬಡಾವಣೆಯಲ್ಲಿ ಕೋಟ್ಯಾಂತರ ರುಪಾಯಿ ಬೆಲೆ ಬಾಳುವ ಸರ್ಕಾರಿ ಆಸ್ಥಿಯನ್ನ ಸಂರಕ್ಷಿಸಿ ಮಾದರಿ ಶಾಸಕರಾದ ಟಿ.ಎಸ್.ಶ್ರೀವತ್ಸ ಅವರನ್ನ
ಪ್ರಜ್ಞಾವಂತ ನಾಗರೀಕರು ಸನ್ಮಾನಿಸಿ ಅಭಿನಂದಿಸಿದರು.
ಅಗ್ರಹಾರದಲ್ಲಿರುವ ಶಾಸಕರ ಕಚೇರಿಯಲ್ಲಿ ಪ್ರಜ್ಞಾವಂತ ನಾಗರೀಕರು ಶ್ರೀವತ್ಸ ಅವರನ್ನು ಸನ್ಮಾನಿಸಿದರು.
ಅಭಿವೃದ್ಧಿ ಹೆಸರಲ್ಲಿ ಹಳೆಮೈಸೂರಿನ ಅಂದ ಚೆಂದ ಸೊಬಗು ಹಾಳು ಮಾಡುವ ನುಂಗಣ್ಣರ ಷಡ್ಯಂತ್ರ ಭೇದಿಸಿ ಎಚ್ಚರಿಕೆ ಕೊಟ್ಟ ಶಾಸಕರ ದಿಟ್ಟ ಹೆಜ್ಜೆ ಶ್ಲಾಘನೀಯವಾದುದು ಎಂದು ಮೈಸೂರಿಗರ ಪರವಾಗಿ ಶ್ರೀವತ್ಸ ರವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದೇವೆ ಎಂದು ಪ್ರಜ್ಞಾವಂತ ನಾಗರೀಕರು ತಿಳಿಸಿದರು.
ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಗೋಪಾಲ್ ರಾಜೆ ಅರಸು, ಪ್ರಧಾನ ಕಾರ್ಯದರ್ಶಿಗಳಾದ ಜಯರಾಮ್, ಜೈ ಶಂಕರ್, ಉಪ ಅಧ್ಯಕ್ಷ ನಾಗರಾಜ್ ಬಿಲ್ಲಯ್ಯ, ಕಾರ್ಯದರ್ಶಿಗಳಾದ ಗಿರೀಶ್ ಗೌಡ, ಬೈರತಿ ಲಿಂಗರಾಜು, ಉಪಾಧ್ಯಕ್ಷರಾದ ರಮೇಶ್, ಪ್ರದೀಪ್, ಕಿಶೋರ್, ಕೀರ್ತಿ ಮುಂತಾದವರು ಅಭಿನಂದಿಸಿದರು.
