ಯಳಂದೂರು: ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ದಾಖಲೆ ನಿರ್ಮಿಸಿರುವ ಶಾಸಕ ಎ ಆರ್. ಕೃಷ್ಣಮೂರ್ತಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಎ ಆರ್ ಕೃಷ್ಣಮೂರ್ತಿ ರವರ ಅಭಿಮಾನಿ ಬಳಗ ಆಗ್ರಹಿಸಿದೆ.
ಯಳಂದೂರು ಪಟ್ಟಣದ ತಾಲ್ಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಚೇರಿಯಲ್ಲಿ ಎ ಆರ್ ಕೃಷ್ಣಮೂರ್ತಿ ಅವರ ಅಭಿಮಾನಿ ಬಳಗ ಹಮ್ಮಿಕೊಂಡಿದ್ದ ಸುದ್ದಿ ಗೋಷ್ಠಿ ಯಲ್ಲಿ ತಾಲ್ಲೂಕು ಗ್ಯಾರೆಂಟಿ ಯೋಜನೆಯ ಅಧ್ಯಕ್ಷರಾದ ಕಿನಕಹಳ್ಳಿ ಪ್ರಭು ಪ್ರಸಾದ್ ಮಾತನಾಡಿದರು.
ಈ ರಾಜ್ಯ ಕಂಡ ಅಪ್ರತಿಮ ಧೀಮಂತ ರಾಜ್ಯನಾಯಕ,ರಾಜ್ಯಪಾಲರಾದ ದಿವಂಗತ ಬಿ ರಾಚಯ್ಯನವರು ಈ ಕ್ಷೇತ್ರದಿಂದ ಪ್ರಥಮ ಶಾಸಕರಾಗಿ ಅನೇಕ ರೀತಿಯ ಜನಪರ ಕಾರ್ಯಕ್ರಮ ರೂಪಿಸಿ ರಾಜ್ಯ ಮತ್ತು ಕೇಂದ್ರದಲ್ಲಿ ಸಚಿವರಾಗಿ ರಾಜ್ಯಕ್ಕೆ ಅನೇಕ ರೀತಿಯಲ್ಲಿ ಕೊಡುಗೆ ನೀಡಿ,ಜನ ಮನ್ನಣೆ ಗಳಿಸಿದ್ದ ದಿವಂಗತ ಬಿ ರಾಚಯ್ಯನವರ ಸುಪುತ್ರರಾದ ಶಾಸಕ ಎ ಆರ್ ಕೃಷ್ಣಮೂರ್ತಿ ಅವರು ಮೂರು ಬಾರಿ ಶಾಸಕರಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಾಜ್ಯದಲ್ಲಿ ದಕ್ಷ ಪ್ರಾಮಾಣಿಕ ಹಗಲು ಇರುಳು ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಕ್ಷೇತ್ರಕ್ಕೆ 500 ಕೋಟಿಗೂ ಹೆಚ್ಚು ಅನುದಾನ ತರುವ ಮೂಲಕ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದಾರೆ 24*7 ಕೆಲಸ ಮಾಡುತ್ತಾರೆ,ಇನ್ನು ಹೆಚ್ಚಿನ ರೀತಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿ ಆಗುವ ರೀತಿಯಲ್ಲಿ ಕ್ಷೇತ್ರದ ಜನಪ್ರಿಯ ಶಾಸಕರಾದ ಎ ಆರ್ ಕೃಷ್ಣಮೂರ್ತಿ ಅವರನ್ನು ಸಚಿವರನ್ನಾಗಿ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕಂದಹಳ್ಳಿ ನಂಜುಂಡಸ್ವಾಮಿ,ಹೊನ್ನೂರು ರಾಘುವೇಂದ್ರಪ್ರಸಾದ್, ಬೂಧಿತಿಟ್ಟು ಮಹದೇವ್,ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ದುಗ್ಗಹಟ್ಟಿ ಜಿ.ಮಾದೇಶ್, ಈರಣ್ಣ , ಟೌನ್ ಪಂಚಾಯಿತಿ ಮಾಜಿ ನಾಮ ನಿರ್ದೇಶಿತ ಸದಸ್ಯರಾದ ಮುನಾವರ್ ಬೇಗ್, ತಾಲ್ಲೂಕು ಗ್ಯಾರೆಂಟಿ ಯೋಜನೆಯ ಸದಸ್ಯರಾದ ವಿಶ್ವ ಗಣಿಗನೂರು, ವೈ ಕೆ ಮೋಳೆ ವಿಜಯ್ ಉಪಸ್ಥಿತರಿದ್ದರು.
