ಮೈಸೂರು: ಶಾಸಕ ಹರೀಶ್ ಗೌಡ ಸ್ನೇಹ ಬಳಗದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ಯುಗಾದಿ ಹಬ್ಬದ ಅಂಗವಾಗಿ ಬ್ರಾಹ್ಮಣ ಕುಟುಂಬದವರಿಗೆ ಉಚಿತ ಒಂಟಿಕೊಪ್ಪಲ್ ಪಂಚಾಂಗ ವಿತರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಾರ್ಚ್ 15 ಭಾನುವಾರ ಸಂಜೆ 5.30ಕ್ಕೆ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಸದ್ವಿದ್ಯಾ ಶಿಕ್ಷಣ ಸಂಸ್ಥೆ ಆವರಣದಲ್ಲಿ ಪಂಚಾಂಗ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಸಂಚಾಲಕ ನವೀನ್ ತಿಳಿಸಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಗೌಡ,ಯೋಗ ನರಸಿಂಹ ಸ್ವಾಮಿ ದೇವಸ್ಥಾನದ ಸಂಸ್ಥಾಪಕರಾದ ನಾಡೋಜ ಡಾ.ಭಾಷ್ಯಂ ಸ್ವಾಮೀಜಿ,ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕರಾದ ಶಶಿ ಶೇಖರ ದೀಕ್ಷಿತ್,
ಇತಿಹಾಸ ತಜ್ಞರಾದ ಶೆಲ್ವಪಿಳೈ ಅಯ್ಯಂಗಾರ್,
ಮೇಲುಕೋಟೆ ವಂಗಿಪುರ ಮಠದ ಇಳೈ ಆಳ್ವಾರ್,ಅಮೃತೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಮೈ ಕುಮಾರ್,ಸದ್ವಿದ್ಯಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ ಡಿ ಗೋಪಿನಾಥ್,
ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪಾಯಿ,ಮೈಸೂರು ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ,ಅಜಯ್ ಶಾಸ್ತ್ರಿ ಮತ್ತಿತರ ವಿಪ್ರ ಮುಖಂಡರು ಭಾಗವಹಿಸಲಿದ್ದಾರೆ.
