ಪಿರಿಯಾಪಟ್ಟಣ: ಪಿರಿಯಾಪಟ್ಟಣ ತಾಲ್ಲೂಕು ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಶ್ರೀ ರೇಣುಕಾಚಾರ್ಯರ ಜಯಂತಿಯನ್ನು ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಶ್ರೀರಾಮ ಪ್ರೌಢಶಾಲೆಯ ಶಿಕ್ಷಕರಾದ ಕಿಶೋರ ಆರಾಧ್ಯ ಅವರು ಶಂಕರಾಚಾರ್ಯರ ಬಗ್ಗೆ ಅರಿವು ಮೂಡಿಸಿದರು.
ಶಿರಸ್ತೆದಾರ್ ಶಶಿಕಲಾ ಬಾನು ರಾಷ್ಟ್ರೀಯ ಹಬ್ಬಗಳ ಬಗ್ಗೆ ಮಾತನಾಡಿದರು.
ಪಿರಿಯಾಪಟ್ಟಣ ಪತ್ರಕರ್ತ ಸಂಘದ ಅಧ್ಯಕ್ಷ ಸತೀಶ್ ಆರಾಧ್ಯ ಅವರು ವಂದನಾರ್ಪಣೆ ಮಾಡಿದರು.
ಶಿಕ್ಷಕರ ಸಂಘದ ಅಧ್ಯಕ್ಷ ಹೊಸಳ್ಳಿ ಕೃಷ್ಣೇಗೌಡರು, ಪಂಡಿತ್ ಆರಾಧ್ಯ, ಪತ್ರಕರ್ತ ಸತೀಶ್, ರಂಗನಾಥ, ಶಶಿಕರ, ಮಧು, ಚಂದ್ರೇಗೌಡ, ಸಣ್ಣ ಸ್ವಾಮಿ, ಕುಸುಮ, ಸುಮ, ಕಿರಂಗೂ ರವಿ, ಪ್ರಶಾಂತ್, ನಿರಂಜನ್, ಶಿವರಾಮೇಗೌಡ, ಎಂ.ಬಿ ಸಂಪತ್, ಕರ್ನಾಟಕ ಹಸಿರು ಸೇನೆಯ ಸ್ವಾಮಿಗೌಡ್ರು, ಕಾವೇರಮ್ಮ, ಕಾಯಕ ಸಮಾಜದ ಒಕ್ಕೂಟದ ಕೊಣಸೂರು ಶಿವರಾಜ್, ಆನಂದ್, ಪುಟ್ಟಣ್ಣಯ್ಯ, ಅಬ್ದುಲ್ ವಾಜಿದ್, ಕೋಮಲಾಪುರ ಶಿವರಾಜ್, ಮಂಜು, ಮಧು ಮತ್ತಿತರರು ಪಾಲ್ಗೊಂಡಿದ್ದರು.
