(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ತಾಲ್ಲೂಕಿನ ಸಮೂಹ ದೇವಾಲಯಗಳ ಲ್ಲೊಂದಾದ ಸುಪ್ರಸಿದ್ದ ಜಗನ್ಮೋಹನ ಮಧ್ಯರಂಗನಾಥ ಸ್ವಾಮಿ ಹಾಗೂ ರಂಗನಾಯಕಿ ಅಮ್ಮನವರ ದೇವಾಲಯ ಲೋಕಾರ್ಪಣೆಗೆ ಸಿದ್ಧವಾಗುತ್ತಿದೆ.
ಇನ್ನಾ ಅಂತಿಮ ಸ್ಪರ್ಶ ಬಾಕಿ ಇರುವ ಹಿನ್ನೆಲೆಯಲ್ಲಿ ಹನೂರು ಶಾಸಕ ಎಂ.ಆರ್. ಮಂಜುನಾಥ್ ಅವರು ಉಪ ವಿಭಾಗಾಧಿ ಕಾರಿ ಹಾಗೂ ತಹಶೀಲ್ದಾರ್ ಅವರುಗಳ ಜೊತೆ ದೇವಾಲ ಯಕ್ಕೆ ಭೇಟಿ ನೀಡಿ ವೀಕ್ಷಿಸಿ ಸಂಬಂಧ ಪಟ್ಟ ಅಧಿಕಾರಿ ಗಳಿಂದ ಮಾಹಿತಿ ಪಡೆದು ಚರ್ಚೆ ನಡೆಸಿದರು.
ಮೇ.8 (ನಾಳೆ) ರಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕೆಡಿಪಿ ಸಭೆಯ ಬಳಿಕ ಈ ವಿಚಾರವನ್ನು ಪ್ರಸ್ತಾಪಿಸಿ ದೇವಸ್ಥಾನದ ಲೋಕಾರ್ಪಣೆಗೆ ದಿನಾಂಕ ನಿಗದಿ ಪಡಿಸಿ ನಿರ್ಧಾರ ಕೈಗೊಳ್ಳಲಾಗುವುದು. ಒಂದು ವೇಳೆ ಈ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದಿದ್ದರೆ ಮೇ 9 ರಂದು ಸಭೆ ಕರೆದು ಅಂತಿಮ ಸಿದ್ಧತೆ ಮಾಡಿಕೊಳ್ಳೋಣ ಅದಕ್ಕಾಗಿ ಸಂಬಂಧಪಟ್ಟ ಎಲ್ಲಾ ಇಲಾಖೆಯ ಅಧಿಕಾರಿಗಳಿಗೂ ಮಾಹಿತಿ ನೀಡಿ ಎಂದು ಶಾಸಕರು ತಹಸಿಲ್ದಾರ್ ಅವರಿಗೆ ಸೂಚಿಸಿದರು.
ಗೋಪುರಕ್ಕೆ ಅಟ್ಟಣಿಗೆ ಕಟ್ಟುವವರು, ಅಡುಗೆ ಮಾಡುವವರು, ಹೂವಿನ ಅಲಂಕಾರ ಮಾಡುವವರು, ಚಪ್ಪರ ಹಾಕುವವರು, ಸ್ಟೇಜ್ ಹಾಕುವರು, ದೀಪಾಲಂಕಾರ ಮಾಡುವವರು ಸೇರಿದಂತೆ ಎಲ್ಲರನ್ನು ಕರೆಯಿಸಿ ಎಂದು ಆದೇಶಿಸಿದರು.
ಇದೇ ವೇಳೆ ಪಾಕ ಶಾಲೆಗೆ ನೀರಿನ ಸಂಪರ್ಕವಿಲ್ಲ, ಬಣ್ಣ ಬಳಿಯುವ ಕಾಮಗಾರಿ, ದೇವಾಲಯದ ಹೊರಾಂಗಣದ ನೆಲಹಾಸು ಕಾಮಗಾರಿ, ಅಡುಗೆ ಮನೆ ಬಾಗಿಲು ಅಳವಡಿಕೆ ಸೇರಿದಂತೆ ಇನ್ನಿತರ ಕಾಮಗಾರಿಗಳು ಮುಕ್ತಾಯ ಹಂತದಲ್ಲಿದೆ ಎಂದು ಅಧಿಕಾರಿಗಳು ಶಾಸಕರಿಗೆ ಮಾಹಿತಿ ನೀಡಿದರು.
ಯಾವ ಯಾವ ಕಾಮಗಾರಿ ಬಾಕಿ ಇದೆ. ಮುಕ್ತಾಯಗೊಳಿಸಲು ಏನೇನು ಬೇಕು ಎಂಬುದನ್ನು ಪಟ್ಟಿ ಮಾಡಿ ನನಗೆ ವಾಟ್ಸಪ್ ಮಾಡಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮಂಜುನಾಥ್ ತಾಕೀತು ಮಾಡಿದರು.ಈ ಕೂಡಲೇ ಪಾಕ ಶಾಲೆಗೆ ನೀರಿನ ಸಂಪರ್ಕ ಕಲ್ಪಿಸಿ ಕೊಡುವಂತೆ ಗ್ರಾಮ ಪಂಚಾಯಿತಿಗೆ ಸೂಚಿಸಿದರು಼.
ಈ ವೇಳೆ ರಂಗನಾಥಸ್ವಾಮಿ ದೇವಸ್ಥಾನದ ಅಭಿವೃದ್ಧಿಗೆ ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ 25 ಲಕ್ಷ ಅನುದಾನ ಕೊಡಿಸಿದರೆ ಉಳಿದೆಲ್ಲ ಕಾಮಗಾರಿಗಳು ಮುಗಿದು ದೇವಸ್ಥಾನ ಲೋಕಾರ್ಪಣೆಗೆ ಅನುಕೂಲವಾಗಲಿದೆ ಎಂದು ತಹಸಿಲ್ದಾರ್ ಬಸವರಾಜು ಅವರು ಶಾಸಕ ಮಂಜುನಾಥ್ ಅವರಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಸಿದ ಶಾಸಕರು ಸಂಬಂಧಪಟ್ಟವರ ಜೊತೆ ಮಾತನಾಡುವುದಾಗಿ ತಿಳಿಸಿದರು.
ದೇವಸ್ಥಾನದ ಹೊರಗೆ ಇರುವ ಈಶಾನ್ಯ ಭಾಗದ ಜಾಗದಲ್ಲಿ ಪಾರ್ಕಿಂಗ್ ಮತ್ತು ಊಟದ ವ್ಯವಸ್ಥೆ ಒಂದೇ ಕಡೆ ಮಾಡೋಣ ಇಂದು ತಹಸೀಲ್ದಾರ್ ಬಸವರಾಜು ಅವರು ಸಲಹೆ ನೀಡಿದರು. ಬಳಿಕ ಈ ಸಂಬಂಧ ಶಾಸಕರು ಸ್ಥಳ ಪರಿಶೀಲನೆ ಮಾಡಿ ಪಾರ್ಕಿಂಗ್ ಹಾಗೂ ಊಟದ ವ್ಯವಸ್ಥೆಗೆ ಸೂಕ್ತ ಸ್ಥಳ ಎಂದು ನಿರ್ಧರಿಹಿಸಲಾಯಿತು..
ದೇವಸ್ಥಾನ ಲೋಕಾರ್ಪಣೆ ಅಂಗವಾಗಿ ದೇವಸ್ಥಾನದಲ್ಲಿ 5 ದಿನಗಳ ಕಾಲ ಅನ್ನಸಂತರ್ಪಣೆ ನಡೆಯಲಿದೆ. ಅದರಲ್ಲೂ ಒಂದು ದಿನ ಪ್ರಮುಖವಾಗಿ ನಡೆಯಲಿದೆ.ಅಂದು ಸುಮಾರು ಎರಡರಿಂದ ಮೂರು ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡುವುದು.ಅನ್ನ ದಾಸೋಹವನ್ನು ಸಂಸದರ ಸಹಾಯಕರ ಕಡೆಯಿಂದ ಮಾಡಿಸಿ ಕೊಡುವ ನಿರೀಕ್ಷೆ ಇದೆ. ರಂಗನಾಯಕಿ ಅಮ್ಮನವರ ದೇವಸ್ಥಾನ ಪುನರ್ ನಿರ್ಮಾಣ ಮಾಡುತ್ತಿರುವ ಎ ಎಂ ಆರ್ ಗ್ರೂಪ್ ಅವರಿಂದ ಹೂವಿನ ಅಲಂಕಾರ ನಿರೀಕ್ಷಿಸಲಾಗಿದೆ ಎಂದು ಹೇಳಿದರು.
ಪ್ರಾಚ್ಯವಸ್ತು ಇಲಾಖೆ ಹಾಗೂ ದಾನಿಗಳ ನೆರವಿನಿಂದ ಸುಮಾರು 5.38 ಕೋಟಿ ರೂಪಾಯಿಗೂ ಅಧಿಕ ವೆಚ್ಚ ದಲ್ಲಿ ಜೀರ್ಣೋದ್ಧಾರ ಹಾಗೂ ಪುನರ್ ನಿರ್ಮಾಣ ವಾಗಿರುವ ಜಗನ್ಮೋಹನ ಮಧ್ಯರಂಗ ನಾಥಸ್ವಾಮಿ ಹಾಗೂ ರಂಗನಾಯಕಿ ಅಮ್ಮನವರ ದೇವಾಲಯಗಳು ಲೋಕಾರ್ಪಣೆಗೆ ಸಿದ್ಧಗೊಂಡು ಜನ ಸಾಮಾನ್ಯರ ದರ್ಶನಕ್ಕೆ ನೀಡಬೇಕಾಗಿದೆ. ಮೇ 17 ರಿಂದ 21 ರೊಳಗೆ ದೇವಾಲಯಗಳ ಸಂಪ್ರೊಕ್ಷಣೆ ಮಾಡಲು ಕಳೆದ 20 ದಿನಗಳ ಹಿಂದೆಯೇ ಆಗಮಿಕರು ದಿನಾಂಕ ಗುರುತಿಸಿದ್ದಾರೆ. ಈ ಸಂಬಂಧ ಕೂಡಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮತ್ತೊಮ್ಮೆ ಸಭೆ ಕರೆದು ಚರ್ಚಿಸಿ ಅಧಿಕೃತ ದಿನಾಂಕ
ನಿಗದಿ ನಿಗದಿಪಡಿಸವುದಾಗಿ ಶಾಸಕ ಎಂ.ಆರ್ ಮಂಜುನಾಥ್ ನಿರ್ಧರಿಸಿದ್ದರು.
ಈ ಸಂದರ್ಭದಲ್ಲಿ ಕೊಳ್ಳೇಗಾಲ ಉಪವಿಭಾಗಧಿಕಾರಿ ದಿನೇಶ್ ಕುಮಾರ್ ಮೀನಾ,ತಹಸೀಲ್ದಾರ್ ಬಸವರಾಜು, ಲೋಕೋಪಯೋಗಿ ಎಇಇ ಪುರುಷೋತ್ತಮ್,ಸರ್ವೇ ಇಲಾಖೆಯ ನಟರಾಜು,ಧಾರ್ಮಿಕ ದತ್ತಿ ಇಲಾಖೆಯ ಸುರೇಶ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಮಲ್ಲೇಶ್, ಪ್ರಭು,ಶಾಂತರಾಜು, ಗೋವಿಂದ,ಚನ್ನಲಿಂಗನಹಳ್ಳಿ ವೆಂಕಟೇಶ್, ಮತ್ತಿತರ ಅಧಿಕಾರಿಗಳು, ಮುಖಂಡರು ಹಾಜರಿದ್ದರು.

