ಮೈಸೂರು: ಮಧ್ವರ ಸಂದೇಶಗಳು ಸರ್ವಕಾಲಿಕ ಮಾರ್ಗದರ್ಶಕವಾಗಿವೆ ಎಂದು
ಅಖಿಲ ಭಾರತೀಯ ಬ್ರಾಹ್ಮಣ ಏಕೀಕೃತ ಪರಿಷತ್ ಅಧ್ಯಕ್ಷರಾದ ಎನ್ಎಂ ನವೀನ್ ಕುಮಾರ್ ತಿಳಿಸಿದರು.
ಎನ್ ಎಂ ನವೀನ್ ಕುಮಾರ್ ವಿಪ್ರ ಮಿತ್ರ ಬಳಗ ಹಾಗೂ ಅಖಿಲ ಭಾರತೀಯ ಬ್ರಾಹ್ಮಣ ಏಕೀಕೃತ ಪರಿಷತ್ ವತಿಯಿಂದ ಮೈಸೂರಿನ ಸರಸ್ವತಿಪುರಂನಲ್ಲಿರುವ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಶ್ರೀ ಮಧ್ವನವಮಿ ಆಚರಣೆ ವೇಳೆ ಮಧ್ವಾಚಾರ್ಯರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಮಧ್ವಾಚಾರ್ಯರ ಗ್ರಂಥಗಳಲ್ಲಿ ಮಾನವೀಯ ಗುಣಗಳ ಉಲ್ಲೇಖವಿದೆ. ಮಧ್ವಮತದ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ ಅಗ್ರಗಣ್ಯರಲ್ಲಿ ಮಧ್ವಾಚಾರ್ಯರು ಒಬ್ಬರಾಗಿದ್ದಾರೆ ಎಂದು ಹೇಳಿದರು.
ಮಧ್ವರನ್ನು ಕೇವಲ ಒಂದು ದಿನ ಆರಾಧಿಸಿದರೆ ಸಾಲದು. ಪ್ರತಿನಿತ್ಯ ಅವರ ತತ್ವ, ಸಿದ್ಧಾಂತಗಳನ್ನು ಆಚರಣೆ ಮಾಡಬೇಕು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಜ್ಞಾನಕಾರ್ಯಗಳನ್ನು ಮಾಡಿ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು. ವಿಶ್ವಕ್ಕೆ ಪೂರ್ಣಪ್ರಜ್ಞ ದೃಷ್ಟಿಯನ್ನು ನೀಡಿದ ಮಧ್ವರ ಸ್ಮರಣೆ ಪ್ರತಿ ಕ್ಷಣವೂ ಆಗಬೇಕು ಎಂದು ನವೀನ್ ಕುಮಾರ್ ತಿಳಿಸಿದರು.
ಈ ಸಂದರ್ಭದಲ್ಲಿ ಭೂಮಿಕಾ ಸುರೇಶ್, ಮೈಸೂರು ಆನಂದ್, ಎಸ್ ಬಿ ವಾಸುದೇವಮೂರ್ತಿ, ಆರ್ ಎಸ್ ಸತ್ಯನಾರಾಯಣ್, ಅಶ್ವಥ್ ನಾರಾಯಣ್, ಜಯಶ್ರೀ ಶಿವರಾಮ್, ಸುಚಿಂದ್ರ, ಚಕ್ರಪಾಣಿ, ವಿಶ್ವನಾಥ್, ಪ್ರವೀಣ್ ಕುಮಾರ್, ಸತೀಶ್, ಶ್ರೀಕಾಂತ್, ಮುರಳಿ ಮತ್ತಿತರರು ಹಾಜರಿದ್ದರು.
