ಮೈಸೂರು: ಮಹಾ ಶಿವರಾತ್ರಿ ಪಾದಯಾತ್ರೆ ಸಮಯದಲ್ಲಿ ಯಾತ್ರಿಕರಿಂದ ಸ್ವಚ್ಛತೆಗೆ ಧಕ್ಕೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪರಿಸರವಾದಿ ಕೃಷ್ಣಪ್ಪ (ಗಂಟಯ್ಯ) ಮನವಿ ಮಾಡಿದ್ದಾರೆ.
ಮಹಾಶಿವರಾತ್ರಿ ಸಮಯದಲ್ಲಿ ಮಹದೇಶ್ವರ ಬೆಟ್ಟಕ್ಕೆ ಸಾವಿರಾರು ಸಂಖ್ಯೆಯಲ್ಲಿ ಯಾತ್ರಿಕರು ಸಾಗುತ್ತಾರೆ ಈ ದಾರಿಯಲ್ಲಿ ಅನೇಕ ದಾನಿಗಳು ಊಟ ಫಲಹಾರ ತಿಂಡಿ ನೀರು ಪಾನೀಯ ಇತ್ಯಾದಿಗಳ ವ್ಯವಸ್ಥೆಯನ್ನು ಮಾಡುವುದು ಸರಿ,ಆದರೆ ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಪಾದಯಾತ್ರೆ ವೇಳೆ ಆಹಾರ ಪದಾರ್ಥ ಸ್ವೀಕರಿಸಿದ ನಂತರ ಕೆಲವರು ದಾರಿಯಲ್ಲಿ ನೀರಿನ ಬಾಟಲ್ ಪ್ಲೇಟು ಲೋಟ,ಕವರ್ಗಳನ್ನು ರಸ್ತೆ ಪಕ್ಕದಲ್ಲಿ ಬಿಸಾಡಿ ಹೋಗುತ್ತಾರೆ.
ಜಿಲ್ಲಾಡಳಿತ ಯಾತ್ರಿಕರು ಸಾಗುವ ದಾರಿಯಲ್ಲಿ ಒಂದು ಕಸದ ತೊಟ್ಟಿ ವ್ಯವಸ್ಥೆ ಮಾಡಬೇಕು ಎಂದು ಮನವಿ ಗಂಟಯ್ಯ ಕೋರಿದ್ದಾರೆ.
ಮಾರ್ಗ ಮಧ್ಯೆ ಆಯಾ ಗ್ರಾಮ ಪಂಚಾಯಿತಿ ಆಡಳಿತವು ಕಸದ ತೊಟ್ಟಿಗಳನ್ನು ನಿರ್ಮಿಸಿ ಕಸ ಸ್ವೀಕರಿಸಬೇಕು ಈ ವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹೋಂ ಗಾರ್ಡ್ಸ್ಗಳನ್ನು ನೇಮಿಸಬೇಕು ಎಂದು ಸಲಹೆ ನೀಡಿದ್ದಾರೆ.
ಪಾದಯಾತ್ರಿಗಳು ಹಾಗೂ ದಾನಿಗಳು ಪರಿಸರ ಸ್ವಚ್ಛತೆ ಪಾಲಿಸುವಂತೆ ತಿಳಿಹೇಳಬೇಕು.
ಹೋದ ವರ್ಷ ನಾವು ಮೈಸೂರಿನಿಂದ ಪರಿಸರವಾದಿಗಳು ಬಂದು ದಾನಿಗಳಿಗೆ ಅರಿವು ಮೂಡಿಸಿದ್ದೆವು ಮತ್ತು ನೀರಿನ ಬಾಟಲನ್ನು ತಾಳಗಟ್ಟದಿಂದ ಮಾದೇಶ್ವರ ಬೆಟ್ಟದ ವರೆಗೆ ತೆಗೆದುಕೊಂಡು ಹೋಗಲಿಕ್ಕೆ ಬಿಟ್ಟಿರಲಿಲ್ಲ ಎಂದು ಕೃಷ್ಣಪ್ಪ ತಿಳಿಸಿದ್ದಾರೆ.
ನಮಗೆ ಅರಣ್ಯ ಅಧಿಕಾರಿಗಳು ಅಬಕಾರಿ ಇಲಾಖೆಗಳು ಸಹಾಯ ಮಾಡಿದ್ದರು ನಾವು ಯಾತ್ರಿಕರಿಗೆ ಅರಿವು ಮೂಡಿಸಿದೆವು. ಮಹದೇಶ್ವರ ಬೆಟ್ಟದ ಪ್ರಾಧಿಕಾರದವರು ನೀರಿನ ವ್ಯವಸ್ಥೆ ಮಾಡಿರುತ್ತಾರೆ ನೀವುಗಳು ಹಣ್ಣುಗಳನ್ನು ಕೊಟ್ಟರೆ ಒಳ್ಳೆಯದು ಪರಿಸರ ಉಳಿಯುತ್ತದೆ ಎಂದು ಅರಿವು ಮೂಡಿಸಿದ್ದೆವು ಎಂದು ತಿಳಿಸಿದ್ದಾರೆ.
ಈ ವರ್ಷ ಜಿಲ್ಲಾಡಳಿತ ಪ್ಲಾಸ್ಟಿಕ್ ನಿರ್ಮೂಲನೆ ಮಾಡಬೇಕು ಕಸ ವ್ಯವಸ್ಥೆ ಸರಿಯಾಗಿ ನಿರ್ವಹಿಸಬೇಕು ಮಹದೇಶ್ವರ ಬೆಟ್ಟವನ್ನು ಕಾಪಾಡಬೇಕು, ಪ್ರಕೃತಿ ಉಳಿಸಿ ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸಬೇಕು ಎಂದು ಕೃಷ್ಣಪ್ಪ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
