ಮೈಸೂರು: ಲಯನ್ಸ್ ಅಂತರರಾಷ್ಟ್ರೀಯ ಜಿಲ್ಲೆ 317ಜಿ ವತಿಯಿಂದ ಹಮ್ಮಿಕೊಂಡಿದ್ದ ವಿವಿಧ ಕ್ಲಬ್ಗಳ ನೂತನ ಪದಾಧಿಕಾರಿಗಳಾಗಿ ‘ಎಮ್ ಪವರ್–3’ ಹೆಸರಿನ ಸಮಗ್ರ ತರಬೇತಿ ಕಾರ್ಯಾಗಾರ ಯಶಸ್ವಿಯಾಯಿತು.
ಕಾರ್ಯಕ್ರಮವನ್ನು ಗ್ಯಾಟ್ ಎರಿಯಾ ಲೀಡರ್ ಲಯನ್ ಎನ್. ಮೋಹನ್ ಕುಮಾರ್ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಎನ್. ಮೋಹನ್ ಕುಮಾರ್ ಅವರು, ಲಯನ್ಸ್ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ಪರಿಣಾಮಕಾರಿಯಾಗಿ ಸಮಾಜದ ಸೇವೆಗೆ ತಲುಪಿಸಲು ಪದಾಧಿಕಾರಿಗಳಿಗೆ ಗುಣಮಟ್ಟದ ನಾಯಕತ್ವ, ಸಮರ್ಪಣೆ ಮತ್ತು ಸೇವಾ ಮನೋಭಾವ ಅತ್ಯಗತ್ಯ ಎಂದು ತಿಳಿಸಿದರು.
ತರಬೇತಿ ಮೂಲಕ ಸಂಘಟನೆಯ ಕಾರ್ಯವೈಖರಿ, ನಾಯಕತ್ವ ಕೌಶಲ್ಯ ಮತ್ತು ಸೇವಾ ಯೋಜನೆಗಳ ಅನುಷ್ಠಾನದಲ್ಲಿ ಹೆಚ್ಚಿನ ಪರಿಣಾಮಕಾರಿತ್ವ ಸಾಧಿಸಬಹುದೆಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಜಿಲ್ಲಾ ರಾಜ್ಯಪಾಲ ಲಯನ್ ಕೆ.ಎಲ್. ರಾಜಶೇಖರ ಮಾತನಾಡಿ, ಲಯನ್ಸ್ ಸಂಸ್ಥೆಯ ಬೆಳವಣಿಗೆಯಲ್ಲಿ ತರಬೇತಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪ್ರತಿಯೊಬ್ಬ ಪದಾಧಿಕಾರಿಯೂ ಜವಾಬ್ದಾರಿಯನ್ನು ಅರಿತು ತಂಡದೊಂದಿಗೆ ಕಾರ್ಯನಿರ್ವಹಿಸಿದಾಗ ಕ್ಲಬ್ಗಳು ಇನ್ನಷ್ಟು ಬಲಿಷ್ಠವಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಸೇವಾ ಚಟುವಟಿಕೆಗಳಲ್ಲಿ ನವೀನತೆ, ಪಾರದರ್ಶಕತೆ ಮತ್ತು ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯವೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಅಧ್ಯಕ್ಷರು, ಪಿಎಸ್ಟಿ ಫೋರಂ ಲಯನ್ ಜಯಕುಮಾರ್ ಅವರು ಮಾತನಾಡಿ, ನೂತನ ಪದಾಧಿಕಾರಿಗಳು ಈ ತರಬೇತಿಯ ಮೂಲಕ ಪಡೆದ ಜ್ಞಾನ ಮತ್ತು ಅನುಭವವನ್ನು ತಮ್ಮ ಕ್ಲಬ್ಗಳ ಅಭಿವೃದ್ಧಿಗೆ ಬಳಸಿಕೊಂಡು ಸಮಾಜಮುಖಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ ಎನ್ ಕೃಷ್ಣೇಗೌಡ ಎಂಜಿಇಟಿ ಕೋಆರ್ಡಿನೇಟರ್, ಅಶೊಕ್ ಕುಲಕರ್ಣಿ, ಮಾಜಿ ಜಿಲ್ಲಾ ರಾಜ್ಯ ಪಾಲರಾದ ಡಾ. ಜಿ.ಎ. ರಮೇಶ್, ಜಿಲ್ಲಾ ರಾಜ್ಯಪಾಲರಾದ ಎನ್ ಮತಿದೇವಕುಮಾರ್ ,ಒಂದನೇ ರಾಜ್ಯಪಾಲ ಟಿ ನಾರಾಯಣಸ್ವಾಮಿ, ಎರಡನೇ ರಾಜ್ಯಪಾಲ ಎಂ ಸಿದ್ದೇಗೌಡ, ಜಿಲ್ಲಾ ಸಂಪುಟ ಕಾರ್ಯದರ್ಶಿ ಟಿ ಹೆಚ್ ವೆಂಕಟೇಶ್ಜಿ, ಜಿಲ್ಲಾ ಸಂಪುಟ ಖಜಾಂಚಿ ಎ.ಪಿ ಭರತೇಶ್, ಜಿಲ್ಲಾ ರಾಯಭಾರಿ ಎಸ್ ಪಿ ಆದರ್ಶ, ಜೆ ಲ್ ಟಿ ಸಂಯೋಜಿಕರಾದ ನಂದಾಕುಮಾರ್ ಮತ್ತು ಎಲ್.ಶ್ರೀನಿವಾಸ್ ಹಾಜರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಪಿ.ಆರ್.ಎಸ್ ಚೇತನ್, ಎಚ್ ಚಂದ್ರಾರೆಡ್ಡಿ ,ಸುರೇಶ ರಾಮು, ಅಶೋಕ್ ಕುಲಕರ್ಣಿ, ಚೇತನ್ ರಾಮ್, ಎನ್ ಮೋಹನ್ ಕುಮಾರ್ ಅವರುಗಳು ಕಾರ್ಯಾಗಾರದಲ್ಲಿ ವಿವಿಧ ವಿಷಯಗಳ ಕುರಿತು ತರಬೇತಿ ನೀಡಿದರು.
ಲಯನ್ಸ್ ಸಂಘಟನೆಯ ಆಡಳಿತ, ಸದಸ್ಯತ್ವ ವೃದ್ಧಿ, ಸೇವಾ ಯೋಜನೆಗಳ ರೂಪುರೇಷೆ, ನಾಯಕತ್ವ ಅಭಿವೃದ್ಧಿ ಹಾಗೂ ಸಂಘಟನೆಯ ಉದ್ದೇಶಗಳ ಕುರಿತು ಸಮಗ್ರ ಮಾಹಿತಿ ನೀಡಲಾಯಿತು.
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಪದಾಧಿಕಾರಿಗಳು ಉತ್ಸಾಹದಿಂದ ಭಾಗವಹಿಸಿ ತರಬೇತಿಯ ಪ್ರಯೋಜನ ಪಡೆದರು ಎಂದು ಲಯನ್ ಜಿಲ್ಲೆ 317 ಜಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಲಯನ್ ಸಿ.ಆರ್.ದಿನೇಶ್ ಅವರು ತಿಳಿಸಿದ್ದಾರೆ.
