ಲಿಬಿಯಾ: ಲಿಬಿಯಾದಲ್ಲಿ ರಾಜಕೀಯ ಉದ್ವಿಗ್ನತೆ ತೀವ್ರಗೊಂಡಿದ್ದು,ಲಿಬಿಯಾದ ಮಾಜಿ ಸರ್ವಾಧಿಕಾರಿ ಗಡಾಫಿಯ ಪುತ್ರನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.
ಜಿಂಟಾನ್ ನಗರದ ಮನೆಯೊಂದಕ್ಕೆ ನುಗ್ಗಿದ ನಾಲ್ವರು ಬಂದೂಕುಧಾರಿಗಳು ಲಿಬಿಯಾದ ಮಾಜಿ ಸರ್ವಾಧಿಕಾರಿ ಗಡಾಫಿ ಅವರ ಪುತ್ರ ಸೈಫ್ ಅಲ್-ಇಸ್ಲಾಂ ಗಡಾಫಿಯನ್ನು ಗುಂಡಿಕ್ಕಿ ಕೊಂದಿದ್ದಾರೆ.
53 ವರ್ಷದ ಸೈಫ್ ಅಲ್-ಇಸ್ಲಾಂ ಗಡಾಫಿ ತಮ್ಮ ತೋಟದಲ್ಲಿ ಅಡ್ಡಾಡುತ್ತಿದ್ದಾಗ ಏಕಾಏಕಿ ನುಗ್ಗಿದ ಬಂದೂಕುಧಾರಿಗಳು ಸುತ್ತುವರಿದು ಗುಂಡಿಕ್ಕಿದ್ದಾರೆ.ಇದನ್ನು ಲಿಬಿಯಾದ ಅಧಿಕಾರಿಗಳು ತಿಳಿಸಿದ್ದಾರೆ.
ಸೈಫ್ ಅಲ್-ಇಸ್ಲಾಂ ಗಡಾಫಿ ಅವರು ತಮ್ಮ ತಂದೆಯ ಆಡಳಿತದಲ್ಲಿ ಅತ್ಯಂತ ಪ್ರಭಾವಿ ಯಾಗಿದ್ದರು. ಈ ಘಟನೆ ಮತ್ತೊಮ್ಮೆ ಲಿಬಿಯಾದ ಅಸ್ಥಿರ ಭದ್ರತಾ ವ್ಯವಸ್ಥೆ ಮತ್ತು ದೀರ್ಘಕಾಲದ ರಾಜಕೀಯ ವಿಪ್ಲವವನ್ನು ತೋರಿಸುತ್ತಿದೆ.
ನಾಲ್ವರು ಮುಸುಕುಧಾರಿ ಬಂದೂಕುಧಾರಿಗಳು ಅವರ ನಿವಾಸಕ್ಕೆ ಪ್ರವೇಶಿಸಿ, ಭದ್ರತಾ ಕ್ಯಾಮೆರಾಗಳನ್ನು ನಿಷ್ಕ್ರಿಯಗೊಳಿಸಿ, ನಂತರ ಗುಂಡು ಹಾರಿಸಿದ್ದಾರೆ.
ಲಿಬಿಯಾದ ಅಧಿಕಾರಿಗಳು ಹತ್ಯೆಯ ತನಿಖೆಯನ್ನು ಪ್ರಾರಂಭಿಸಿದ್ದಾರೆ.ಈವರೆಗೆ ಗಡಾಫಿ ಪುತ್ರನ ಹತ್ಯೆಯ ಉದ್ದೇಶ ಗೊತ್ತಾಗಿಲ್ಲ.
