ಮೈಸೂರು: ಹಿಂದು ಸಮಾಜೋತ್ಸವ ಪ್ರಯುಕ್ತ ಲಕ್ಷ್ಮೀಪುರಂ ನಗರದ ವತಿಯಿಂದ ನಡೆದ ಬೃಹತ್ ಮೆರವಣಿಗೆ ಸಾರ್ವಜನಿಕರ ಗಮನ ಸೆಳೆಯಿತು.
ಮೈಸೂರಿನ ಜಯನಗರದ ರಾಮ ಮಂದಿರದಲ್ಲಿ ಮೆರವಣಿಗೆಗೆ ನಗರಪಾಲಿಕೆ ಮಾಜಿ ಸದಸ್ಯ ಚನಪ್ಪ ಅವರು ಪುಷ್ಪ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಇಮ್ಮುಡಿ ಗುರುಲಿಂಗ ಸ್ವಾಮಿಜಿ,
ಮಾ.ವೆಂಕಟರಾಮ್ ಜೀ,
ಮಣಿಮಣ್ಣನ್ ವನವಾಸಿ ಕಲ್ಯಾಣ,
ವಿಶ್ವನಾಥ ಸಂಘಚಾಲಕ,
ರಾಮಚಂದ್ರ ಕಾರ್ಯದರ್ಶಿ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.
ಈ ವೇಳೆ ಮಣಿವಣ್ಣನ್ ಅವರು ಮಾತನಾಡಿ
ಹಿಂದು ಸಮಾಜದಲ್ಲಿ ಹಿಂದುತ್ವ ಮುಖ್ಯ ಅದರ ಜೊತೆ ಎಲ್ಲಾ ಸಮಾಜದವರು ಒಗ್ಗಾಟಾಗಿರಬೇಕು ಎಂದು ಕರೆ ನೀಡಿದರು.
ನಮ್ಮೆಲ್ಲ ವ್ಯವಹಾರವು ಕೂಡ ನಮ್ಮ ಸಮಾಜದವರೊಂದಿಗೆ ಇರಬೇಕು, ನಾವೆಲ್ಲರೂ ವಿವೇಕಾನಂದರ ಆದರ್ಶ ಪಾಲನೆ ಮಾಡಬೇಕು,ನಾವೆಲ್ಲರೂ ಧರ್ಮದ ಕೆಲಸ ಮಾಡಬೇಕು,ಸ್ವದೇಶೀ ಗೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು ಎಂದು ಸಲಹೆ ನೀಡಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷಗಳಾಗಿದ್ದು ಇಂತಹ ಸಂಧರ್ಭದಲ್ಲಿ ಪಂಚ ಪರಿವರ್ತನೆ ಗಳನ್ನು ಅಳವಡಿಸಿ ಕೊಳ್ಳೊಣ ಪರಿಸರ ಸಂರಕ್ಷಣೆ, ಸಾಮಾಜಿಕ ಸಾಮರಸ್ಯ, ಸ್ವದೇಶಿ ಚಿಂತನೆ ಮಾಡಬೇಕು ಎಂದು ತಿಳಿಸಿದರು.
ಗುರುಲಿಂಗ ಸ್ವಾಮಿಜಿ ಅವರು ಮಾತನಾಡಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾಡುವ ಕೆಲಸ ಶ್ರೇಷ್ಠ ವಾದ ಕೆಲಸ. ಇವತ್ತು ನಾವು ಖಾವಿ ತೊಟ್ಟು ಕೆಲಸ ಮಾಡಿದರೆ, ನಮ್ಮ ಹಾಗೆಯೆ ಅವರು ಕೆಲಸ ಮಾಡುವ ಮೂಲಕ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಾರೆ ನಾವೆಲ್ಲರೂ ಹಿಂದುಗಳಾಗಿ ಒಂದಾಗಿ ಕೆಲಸ ಮಾಡೊಣ ಎಂದು ಆಶಿಸಿದರು.
ಶಾಸಕ ಟಿ.ಎಸ್.ಶ್ರೀ ವತ್ಸ,ನಗರ ಅಧ್ಯಕ್ಷ ಎಲ್.ನಾಗೇಂದ್ರ, ನಗರ ಉಪಾಧ್ಯಕ್ಷ ವಿಶ್ವಣ್ಣ, ಜೋಗಿಮಂಜು,ಯುವಮೊರ್ಚಾ ಅಧ್ಯಕ್ಷ ರಾಕೇಶ್ ಗೌಡ,ಶೈಲೇಂದ್ರ, ನಿಶಾಂತ್ ಕೃಷ್ಣನಾಯಕ್,ಅಜಯ್ ಶಾಸ್ತ್ರೀ,
ದೇವರಾಜ,ಕೃಷ್ಣ ಪ್ರದೀಪ್,ಕಿಶೋರ್ ಮತ್ತಿತರರು ಹಾಜರಿದ್ದರು.
