(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಆರ್ ಎಸ್ ಎಸ್ ಸಂಘಟನೆ 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ ವತಿಯಿಂದ ಕೊಳ್ಳೇಗಾಲದಲ್ಲಿ ಹಿಂದೂ ಸಮಾಜೋತ್ಸವ ಸಮಾರಂಭ ನಡೆಯಿತು.
ಪಟ್ಟಣದ ಶ್ರೀ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಹಿಂದೂ ಸಮಾಜೋತ್ಸವ ಆಚರಣಾ ಸಮಿತಿಯ ಅಧ್ಯಕ್ಷ ರಮೇಶ್ ಮುರಾರಿ ಅವರ ನೇತೃತ್ವದಲ್ಲಿ ನಡೆದ ಸಮಾರಂಭಲ್ಲಿ ಮುಡಿಗುಂಡ ವಿರಕ್ತ ಮಠದ ಶ್ರೀಕಂಠಸ್ವಾಮಿಜೀ ಅವರು ಆಶೀರ್ಚನ ನೀಡಿದರು.
ಭಾರತ ದೇಶ ನಂಬಿರುವುದು ಧರ್ಮವನ್ನು ಆದ್ದರಿಂದ ಅದು ಸಧೃಡವಾಗಿದೆ. ಆದರೂ ವಲಸಿಗರ ಸಮಸ್ಯೆಯಿದೆ. ಹಾಗೆಯೇ ಉಗ್ರವಾದ ಬಹಳ ಸಮಸ್ಯೆ ಕೆಲವು ಪಟ್ಟಣ, ನಗರಗಳಲ್ಲಿ ಜನತೆ ಜೀವನ ನಡೆಸಲು ಕಷ್ಟವಾಗಿದೆ. ಜೀವ ಭಯದಿಂದ ಜೀವನ ನಡೆಸುತ್ತಿವೆ ಎಂದು ಶ್ರೀಗಳು ಆತಂಕ ವ್ಯಕ್ತಪಡಿಸಿದರು.
ಮೊದಲು ಉಗ್ರವಾದ ನಿಗ್ರಹವಾಗಬೇಕಿದೆ.
ಉಗ್ರವಾದ ನಿಗ್ರಹವಾಗಬೇಕಾದರೆ ಸಂಘದ ಶಕ್ತಿ ಹೆಚ್ಚಬೇಕು, ಅದಕ್ಕಾಗಿ ಸಂಘ ಶಕ್ತಿಯುತವಾಗಿ ಬೆಳೆಯಬೇಕು. ರಾಷ್ಟ್ರಪ್ರೇಮ ವಾಗಬೇಕು, ರಾಷ್ಟ್ರಪ್ರೇಮ ನಿರ್ಮಾಣವಾಗಲು ಹಿಂದೂ ಧರ್ಮ ಕುಟುಂಬವಾದರೆ, ನಾವೆಲ್ಲ ಭಾರತೀಯರು ನಾವೆಲ್ಲ ಒಂದೇ ಎಂಬ ಭಾವನೆ ಬೆಳೆಯಬೇಕು ರಾಷ್ಟ್ರ ನಿರ್ಮಾಣ ಮಾಡಬೇಕು ಎಂದು ಕರೆ ನೀಡಿದರು.
ದಿಕ್ಕೂಚಿ ಭಾಷಣ ಮಾಡಿದ ವಕೀಲರು ಹಾಗೂ ಗುಂಡ್ಲುಪೇಟೆ ಸಾಮಾಜಿಕ ಕಾರ್ಯಕರ್ತರಾದ ಶ್ರೀ ಸ್ವಾಮಿ ಮರಳಾಪುರ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಜಾತಿಯತೆಯನ್ನು ಮೀರಿ ಸಾಕಷ್ಟು ಕೆಲಸ ಮಾಡಿದೆ ಎಂದು ಹೇಳಿದರು.
ಸಮಾರಂಭಕ್ಕೂ ಮೊದಲು ಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನದಿಂದ ಶೋಭಾಯಾತ್ರೆ ತೆರಳಿತು. ಪೂರ್ಣಕುಂಭ ಕಲಾತಂಡಗಳೊಡನೆ ಭಾರತಾಂಬೆ ಭಾವಚಿತ್ರ ಹೊತ್ತ ಶೋಭಾಯಾತ್ರೆಯು ತರಕಾರಿ ಮಾರುಕಟ್ಟೆ ರಸ್ತೆ, ಕುಮಾರ ಎಲೆಕ್ಟ್ರಿಕಲ್ ರಸ್ತೆ, ಜನಾರ್ಧನ ಹಾಲ್ ರಸ್ತೆ, ಹಳೆ ಮಸೀದಿ, ಮಳಿಗೆ ಮಾರಮ್ಮ ದೇವಸ್ಥಾನ ರಸ್ತೆ, ಪಂಚರಂಗಿ ಸರ್ಕಲ್, ಗರಡಿ ಬೀದಿ, ಅಚ್ಗಳ್ ಸರ್ಕಲ್, ಪ್ರಶಾಂತಿ ಲಾಡ್ಜ್ ಜಯ ಇನ್ಸ್ಟಿಟ್ಯೂಟ್ ರಸ್ತೆ ಮೂಲಕ ಸಾಗಿ ಹಳೇ ನಗರಸಭೆ ರಸ್ತೆಯಲ್ಲಿ ಚೌಡೇಶ್ವರಿ ಕಲ್ಯಾಣ ಮಂಟಪ ತಲುಪಿತು.
ಶೋಭಾಯಾತ್ರೆಯಲ್ಲಿ ಮಾಜಿ ಶಾಸಕ ಎಸ್. ಬಾಲರಾಜು, ಹಿಂದೂ ಸಮಾಜೋತ್ಸವ ಆಚರಣಾ ಸಮಿತಿಯ ಅಧ್ಯಕ್ಷ ರಮೇಶ್ ಮುರಾರಿ, ಕಾರ್ಯದರ್ಶಿ ಮುಡಿಗುಂಡ ಉದಯಕುಮಾರ್, ಕೋಶಾಧ್ಯಕ್ಷ ಮಧುಸೂದನ್, ಉಪಾಧ್ಯಕ್ಷ ಚಿಕ್ಕ ಮಾದನಾಯಕ, ಬೂದಿತಿಟ್ಟು ಶಿವಕುಮಾರ್, ಡೈರಿ ಗಿರೀಶ್, ಶಂಕರ್ ನಾಯಕ್, ಲಿಂಗಣಪುರ ಬಸವರಾಜಪ್ಪ, ತೇರಂಬಳ್ಳಿ ರವಿಕುಮಾರ್, ಡಿ ಸುರೇಶ್, ಯುವ ಮೋರ್ಚಾದ ರವಿಕುಮಾರ್, ಎಸ್. ಸಿ.ಮೋರ್ಚಾದ ಸಿದ್ದಪ್ಪಾಜಿ, ಕುಣಗಳ್ಳಿ ರವಿ, ಚಿಂತು ಪರಮೇಶ್, ಶಿವಕುಮಾರ್, ಮಧುಚಂದ್ರ,ಷರಾಪು ರವೀಶ್, ಕೆ.ಕೆ ಮೂರ್ತಿ, ಸೇರಿದಂತೆ ಅನೇಕ ಮುಖಂಡರುಗಳು ಪದಾಧಿಕಾರಿಗಳು ಭಾಗವಹಿಸಿದ್ದರು
ನಂತರ ಶ್ರೀ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಹಿಂದೂ ಸಮಾಜೋತ್ಸವ ಸಮಾರಂಭ ಕಾರ್ಯಕ್ರಮ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕೊಳ್ಳೇಗಾಲ ದೇವಾಂಗ ಸಮಾಜದ ಯಜಮಾನರಾದ ಶ್ರೀ ಅಚ್ಚಾಳ್ ನಾಗರಾಜಯ್ಯ ಅವರು ವಹಿಸಿದ್ದರು.
.
