ಕಿಚ್ಚ ಸುದೀಪ್ ಸ್ಯಾಂಡಲ್ ವುಡ್ ಕಂಡ ಶ್ರೇಷ್ಠ ನಟರಲ್ಲಿ ಒಬ್ಬರುಅವರು ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ.
ಮ್ಯಾಕ್ಸ್ ಹಾಗೂ ಮಾರ್ಕ್ ಮೂಲಕ 2024 ಹಾಗೂ 2025ರಲ್ಲಿ ಅಭಿಮಾನಿಗಳ ಮನಸೂರೆಗೊಂಡರು.
ಸುದೀಪ್ ಅವರ ಸಿನಿ ಪಯಣಕ್ಕೆ ಇದೀಗ 30 ವರ್ಷ ಗಳು ಮೂರು ದಶಕಗಳ ಯಶಸ್ಸಿನ ಪಯಣದಲ್ಲಿ ತಮ್ಮೊಡನೆ ಭಾಗಿಯಾದ ಎಲ್ಲರಿಗೂ ಅವರು ಧನ್ಯವಾದ ತಿಳಿಸಿದ್ದಾರೆ.
ಕುಚ್ಚ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು ಜನವರಿ 31 ಕ್ಕೆ 30 ವರ್ಷಗಳು ಕಳೆದಿವೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ.
ಈ ಕುರಿತು ಅವರು ಪತ್ರ ಬರೆದುಕೊಂಡಿದ್ದಾರೆ. ಮೂವತ್ತು ವರ್ಷಗಳ ಸಾರ್ಥಕ ಪಯಣ ಎಂದು ಸುದೀಪ್ ಪತ್ರ ಆರಂಭಿಸಿದ್ದಾರೆ. ‘ಚಿತ್ರರಂಗದಲ್ಲಿ 3 ದಶಕಗಳನ್ನು ಪೂರೈಸಿ ನಿಂತಿರುವ ಈ ಕ್ಷಣದಲ್ಲಿ ನನ್ನ ಹೃದಯ ತುಂಬಿ ಬಂದಿದೆ. ಅಂದು ಕನಸುಗಳು, ಅನುಮಾನಗಳು ಮತ್ತು ಅಪಾರ ಭರವಸೆ ಹೊತ್ತಿದ್ದ ಒಬ್ಬ ಹುಡುಗ ನಾನು. ಅಂದಿನ ಸ್ಥಿತಿಗೂ, ಇಂದು ಬೆಳೆದಿರುವ ರೀತಿ ಊಹಿಸಿದ್ದಕ್ಕಿಂತ ದೊಡ್ಡದಾಗಿದೆ. ಇದಕ್ಕೆ ಕಾರಣ ನೀವು ಎಂದು ಅಭಿಮಾನಿಗಳಿಗೆ ಸುದೀಪ್ ಧನ್ಯವಾದ ಹೇಳಿದ್ದಾರೆ.
ಅಭಿಮಾನಿಗಳೇ ನನ್ನ ಶಕ್ತಿ, ನೀವೇ ನನ್ನ ಪ್ರೇರಣೆ. ನಾನು ಪ್ರತಿದಿನ ಕೆಲಸಕ್ಕೆ ಬರಲು ನೀವೇ ಕಾರಣ ಎಂದು ಹೃದಯದಾಳದಿಂದ ಹೇಳಿದ್ದಾರೆ.
ನಿಮ್ಮ ಕಥೆಗಳಿಗೆ ನಾನು ಸರಿ ಹೊಂದುತ್ತೇನೆ ಎಂದು ನಂಬಿ ಜವಾಬ್ದಾರಿ ನೀಡಿದ್ದಕ್ಕಾಗಿ, ನನ್ನನ್ನು ಹುರಿದುಂಬಿಸಿದ್ದಕ್ಕಾಗಿ ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಮೇಲೆ ಭರವಸೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು ಎಂದು ನಿರ್ದೇಶಕರು ಮತ್ತು ಬರಹಗಾರರಿಗೆ ಕಿಚ್ಚ ಬರೆದಿದ್ದಾರೆ.
ನಿಮ್ಮ ಧೈರ್ಯ ಮತ್ತು ನಂಬಿಕೆ ನನ್ನ ಕನಸುಗಳನ್ನು ನನಸಾಗಿಸಿವೆ ಎಂದು ನಿರ್ಮಾಪಕರಿಗೆ ಹೇಳಿದರೆ, ಸಿನಿಮಾ ಎಂಬುದು ಸಂಘಟಿತ ಕೆಲಸ, ಲೈಟ್ ಬಾಯ್ ಇಂದ ಕ್ಯಾಮೆರಾಮನ್ಗಳವರೆಗೆ, ಕಲಾ ತಂಡದಿಂದ ಕಾಸ್ಟ್ಯೂಮ್ ಡಿಸೈನರ್ವರೆಗೆ, ಸ್ಪಾಟ್ ಬಾಯ್ಸ್ನಿಂದ ಹಿಡಿದು ಎಡಿಟರ್ಗಳವರೆಗೆ, ನಿಮ್ಮ ತೆರೆಯ ಹಿಂದಿನ ಶ್ರಮವೇ ಎಲ್ಲದಕ್ಕೂ ಕಾರಣ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ ಕಿಚ್ಚ.
ಈ 30 ವರ್ಷಗಳು ನನಗೆ ಒಂದು ಪಾಠ ಕಲಿಸಿದ್ದರೆ ಅದು ‘ಮಾನವೀಯತೆ ಎಂದು ಸುದೀಪ ಹೇಳಿದ್ದಾರೆ. ನಾನು ಇನ್ನೂ ಕಠಿಣವಾಗಿ ಶ್ರಮಿಸುತ್ತೇನೆ, ಕಲೆಯನ್ನು ಗೌರವಿಸುತ್ತೇನೆ ಮತ್ತು ಸಿನಿಮಾ ನನಗೆ ನೀಡಿದ್ದನ್ನು ಮರಳಿ ನೀಡುತ್ತೇನೆ ಎಂದು ಸುದೀಪ್ ಮನದುಂಬಿ ಪತ್ರದಲ್ಲಿ ಬರೆದುಕೊಂಡಿದ್ದಾರೆ.
