ಕೆ ಆರ್ ನಗರ: ಕೆ.ಆರ್.ನಗರ ತಾಲೂಕು ನಾಡಪ್ಪನಹಳ್ಳಿ ಗ್ರಾಮದ ಕುಂಬಾರ ಜನಾಂಗದ ವತಿಯಿಂದ ಸರ್ವಜ್ಞ ಜಯಂತಿ
ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಸಾ ರಾ ಮಹೇಶ್ ಮತ್ತು ಕುಂಬಾರ ಸಂಘದ ಕುಲಾಲಗುಂಡ ಬ್ರಹ್ಮ ಗುರುಜಿಯವರು ಅವರು ಸರ್ವಜ್ಞ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ನಂತರ ಗ್ರಾಮದ ವತಿಯಿಂದ ಗುರುಗಳಿಗೆ ಸನ್ಮಾನ ಮಾಡಲಾಯಿತು.
ಈ ವೇಳೆ ಮಾತನಾಡಿದ ಅವರು ನಾಳಪ್ಪನಹಳ್ಳಿ ಕುಂಬಾರರ ಸಂಘಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು 10 ಲಕ್ಷ ರೂ ಮಂದಿರಕ್ಕೆ ಮಂಜೂರು ಮಾಡುವುದಾಗಿ ತಿಳಿಸಿದ್ದರು.ಇದಕ್ಕೆ ಮುಖ್ಯ ರೂವಾರಿಗಳಾದ ಪಂಚಾಯಿತಿ ಸದಸ್ಯರಾದ ಮಾದೇವು ಎಂದು ಹೇಳಿದರು.ನಂತರ ಅವರಿಗೆ ಗೌರವಿಸಲಾಯಿತು.
ಕೆ ಆರ್ ನಗರದ ತಿಮ್ಮ ಶಟ್ರು, ನಿಜಗನಹಳ್ಳಿ ಮಂಜುನಾಥ್, ಕೆ ಆರ್ ನಗರ ಕುಮಾರ್,ಕೆ ಆರ್ ನಗರದ ಹೆಗಂದೂರು ಪ್ರಭಾಕರ್, ಪಿರಿಯಾಪಟ್ಟಣ ತಾಲೂಕು ಕುಂಬಾರ ಸಂಘದ ಸಂಘಟನಾ ಕಾರ್ಯದರ್ಶಿ ಕೊಣಸೂರು ಶಿವರಾಜ್, ಪಿರಿಯಾಪಟ್ಟಣ ತಾಲೂಕಿನ ಖಜಾಂಚಿ ಸ್ವಾಮಿಶೆಟ್ಟಿ, ಮಾಗೋಡು ಬಸವರಾಜ್, ನಾಳಪ್ಪನಹಳ್ಳಿ ಹಿರಿಯ ಮುಖಂಡರುಗಳು ಹಾಗೂ ಪದಾಧಿಕಾರಿಗಳು,ಊರ ಯಜಮಾನರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
