ಕೊಳ್ಳೇಗಾಲ: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ನಾರಿ ಕಿಲ್ಪ್ ಸಮಾವೇಶಿ ಆಜೀವಿಕಾ ಯೋಜನೆ 2.0 ಗೆ ಬಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 19 ಪಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸ ಲಾಯಿತು
ಹನೂರು ತಾಲ್ಲೂಕಿನ ಬಂಡಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದ ಸಂಜೀವಿನಿ ಭವನದ ಆವರಣದಲ್ಲಿ ಸಂಜೀವಿನಿ ಅಮೃತ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಸಭೆ ನಡೆಯಿತು.
ಸಭೆಯಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ನಾರಿ ಕಿಲ್ಪ್ ಸಮಾವೇಶಿ ಆಜೀವಿಕಾ ಯೋಜನೆ 2.0 ಮುಖಾಂತರ ಬಂಡಳ್ಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಸಾಮಾನ್ಯವಾಗಿ ತೀವ್ರ ಬಡತನ, ಅಂಗವೈಕಲ್ಯ, ದೀರ್ಘಕಾಲದ ಅನಾರೋಗ್ಯ, ವೃದ್ಧರು ಇರುವ ಕುಟುಂಬ, ಏಕಪೋಷಕ ಕುಟುಂಬ, ಜೀವನೋಪಾಯದ ಕೊರತೆ ಅಥವಾ ಇತರ ಸಾಮಾಜಿಕ-ಆರ್ಥಿಕ ಕಾರಣಗಳಿಂದ ವಿಶೇಷ ನೆರವು ಅಗತ್ಯವಿರುವ ಕುಟುಂಬಗಳ ಸಮೀಕ್ಷೆ ಮಾಡಿ ಅವರಿಗೆ ಜೀವನೋಪಾಯ ಚಟುವಟಿಕೆ ಮಾಡಿಸುವ ಸಲುವಾಗಿ ಮತ್ತು ಸರ್ಕಾರಿ ಸವಲತ್ತು ಒದಗಿಸುವ ಸಂಬಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 19 ಪಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಯಿತು.
ಸಭೆಯಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ತಾಲ್ಲೂಕು ವ್ಯವಸ್ಥಾಪಕ ನಿಂಗರಾಜು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ವೈರಮಾಣಿಕ್ಯಂ ಗ್ರಾಮ ಲೆಕ್ಕಾಧಿಕಾರಿ ನಾಗರಾಜು, ಹಾಗೂ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ತಾಲ್ಲೂಕು ಸಂಜೀವಿನಿ ಸಿಬ್ಬಂದಿಗಳು, ಒಕ್ಕೂಟದ ಸಿ ಆರ್ ಪಿ ಗಳು ನಾರಿ ಕಿಲ್ಪ್ ನ ಪಲಾನುಭವಿಗಳು ಮತ್ತು ಸ್ವ ಸಹಾಯ ಗುಂಪಿನ ಮಹಿಳೆಯರು ಹಾಜರಿದ್ದರು.
