ಹುಣಸೂರು: ಹುಣಸೂರು ತಾಲೂಕು ಗಾವಡಗೆರೆ ಹೋಬಳಿ ಕಟ್ಟೆಮಳಲವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೊಸದಾಗಿ ಎಚ್ ಡಿ ದೇವಕುಮಾರ್ ಅವರು ಮುಖ್ಯೋಪಾಧ್ಯಾಯರಾಗಿ ಆಗಮಿಸಿದ್ದಾರೆ.
ಅವರನ್ನು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಹುಣಸೂರು ಅಧ್ಯಕ್ಷರಾದ ಮಹದೇವಮ್ಮ ಅವರು ಶಾಲಾ ಕಚೇರಿಯಲ್ಲಿ ಅಭಿನಂದಿಸಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿದ ನೂತನ ಮುಖ್ಯೋಪಾಧ್ಯಾಯರಾದ ಎಚ್ ಡಿ ದೇವ ಕುಮಾರ್ ಅವರು ಮಾತನಾಡಿ ಈ ಶಾಲೆಯಲ್ಲಿ ನಾನು ಎಲ್ಲಾ ಶಿಕ್ಷಕ ವೃಂದದವರನ್ನು ಒಂದುಗೂಡಿಸಿಕೊಂಡು ಅತ್ಯುತ್ತಮವಾಗಿ ನನ್ನ ಕಾರ್ಯ ಕೆಲಸಗಳನ್ನು ನಿರ್ವಹಿಸುತ್ತೇನೆ ಎಂದು ತಿಳಿಸಿದರು.
ಮಹದೇವಮ್ಮ ಅವರು ಮಾತನಾಡಿ ಗ್ರಾಮದ ಎಲ್ಲರ ಸಹಕಾರ ಮತ್ತು ಶಿಕ್ಷಕರ ಸಲಹೆ ಸಹಕಾರಗಳನ್ನು ಪಡೆದುಕೊಂಡು ಶಾಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕು, ನಮ್ಮ ಸಹಕಾರ ಪ್ರೋತ್ಸಾಹ ಈ ಶಾಲೆಗೆ ಸದಾ ಇರುತ್ತದೆ ಎಂದು ಭರವಸೆ ನೀಡಿದರು.
ಸಹ ಶಿಕ್ಷಕರಾದ ಯೋಗೇಶ್ ಕುಮಾರ್ ಅವರು ಮಾತನಾಡಿ ಮಹದೇವಮ್ಮ ನವರು ನಮ್ಮ ಶಾಲೆಯ ಎಲ್ಲಾ ಕಾರ್ಯ ಚಟುವಟಿಕೆಗಳು ಹಾಗೂ ಮಕ್ಕಳಿಗೆ ಪ್ರೋತ್ಸಾಹ ಕೊಡುತ್ತಾ ಬಂದಿರುದ್ದಾರೆ ಅವರಿಗೆ ನಮ್ಮ ಶಾಲೆಯ ಪರವಾಗಿ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇವೆ ಎಂದು ತಿಳಿಸಿದರು.
ಶಾಲೆಯ ಸಹ ಶಿಕ್ಷಕರಾದ ಲೂಸಿ ಪ್ರೇಮ, ಲತಾ ಕುಮಾರಿ ಇ, ಪದ್ಮ ಹೆಚ್ ವಿ, ನಾಗವೇಣಿ, ರತ್ನ ಎನ್, ಜಗದೀಶ್ ಎಲ್ ಕೆ, ಶಿಲ್ಪ ಎನ್ ಆರ್, ಶಶಿಕಲಾ ಎಸ್ ಎಸ್, ವಿಜಯಲಕ್ಷ್ಮಿ ಸಿ ಎನ್, ರಂಗನಾಥ್ ಇ ಎಂ, ರೂಪ ಕೆಎಸ್, ನೇತ್ರಾವತಿ, ರೋಜಾ ಹೆಚ್ ಆರ್, ಆಶಾ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
