ಕಠ್ಮಂಡು: ನೇಪಾಳದ ರಾಜಧಾನಿ ಕಠ್ಮಂಡುವಿಗೆ ಹೋಗುತ್ತಿದ್ದ ಬಸ್ ಸೋಮವಾರ ಮುಂಜಾನೆ ಪರ್ವತ ಮಾರ್ಗದಿಂದ ಉರುಳಿ ಬಿದ್ದು19 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ.
ಪ್ರವಾಸಿ ನಗರವಾದ ಪೋಖರಾದಿಂದ ಕಠ್ಮಂಡುವಿಗೆ ತೆರಳುತ್ತಿದ್ದ ಬಸ್ ಪೃಥ್ವಿ ಹೆದ್ದಾರಿಯಿಂದ ಚಾಲಕನ ನಿಯಂತ್ರಣ ತಪ್ಪಿ ಕಣಿವೆಗೆ ಉರುಳಿದೆ.
ಬಸ್ ಪರ್ವತ ಇಳಿಜಾರಿನಿಂದ ಕೆಳಗೆ ಬಿದ್ದು, ಕಠ್ಮಂಡುವಿನಿಂದ ಸುಮಾರು 80 ಕಿಲೋಮೀಟರ್ ಪಶ್ಚಿಮದಲ್ಲಿರುವ ಬೆನಿಘಾಟ್ ಸಮೀಪ ತ್ರಿಶೂಲಿ ನದಿಯ ತೀರದಲ್ಲಿ ನಜ್ಜುಗುಜ್ಜಾಗಿ ಬಿದ್ದಿತ್ತು.
ತಕ್ಷಣ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಗಾಯಾಳುಗಳನ್ನು ಅವಶೇಷಗಳಡಿಯಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಿದರು.
ನೇಪಾಳದಲ್ಲಿ ಪರ್ವತ ಪ್ರದೇಶಗಳಲ್ಲಿ ಕಿರಿದಾದ ಕಿರಿದಾದ ರಸ್ತೆಯಿಂದಾಗಿ ಬಸ್ ಅಪಘಾತಗಳು ಸರ್ವೇ ಸಾಮಾನ್ಯ.
ಈ ಬಸ್ ವೇಗವಾಗಿ ಹರಿಯುವ ಪರ್ವತ ನದಿಯ ತೀರದಲ್ಲಿ ಬಿದ್ದಿದೆ. 2024ರಲ್ಲಿ 65 ಮಂದಿ ಪ್ರಯಾಣಿಕರಿದ್ದ ಎರಡು ಬಸ್ಗಳು ಇದೇ ನದಿಗೆ ಬಿದ್ದಿದ್ದವು.
