ಮೈಸೂರು: ಪ್ರತಿ ವರ್ಷವೂ ಬಸವ ಬಳಗ ಒಕ್ಕೂಟ ಹಾಗೂ ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳು ಜೊತೆಗೂಡಿ ಬಸವ ಜಯಂತಿಯನ್ನು ಆಚರಿಸಿಕೊಂಡು ಬರುತ್ತಿವೆ.
ಅದೇ ರೀತಿ ಈ ವರ್ಷವೂ ಸಹ ಏಪ್ರಿಲ್ 19 ಮತ್ತು 20 ರಂದು ಮೈಸೂರು ನಗರದಲ್ಲಿ ಬಸವ ಜಯಂತಿ ಕಾರ್ಯಕ್ರಮ ನಡೆಯಲಿದೆ.
ಈ ಬಾರಿ ಪ್ರಚಾರ ಸಮಿತಿಯ ನಗರಾಧ್ಯಕ್ಷರಾಗಿ ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಅವರನ್ನು ನೇಮಿಸಿ ಜವಾಬ್ದಾರಿಗಳನ್ನು ನೀಡಲಾಗಿದೆ ಎಂದು ಬಸವ ಬಳಗಗಳ ಒಕ್ಕೂಟ ಅಧ್ಯಕ್ಷರಾದ ಎಂ ಚಂದ್ರಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
