ಮೈಸೂರು: ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ 8ನೇ ಘಟಿಕೋತ್ಸವ ಫೆ. 25ರಂದು ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಘಟಿಕೋತ್ಸವ ಕುರಿತು ಡಾಕ್ಟರ್ ಏನ್ ಸಂತೋಷ್ ಕುಮಾರ್ ಅವರು ಮಾಹಿತಿ ನೀಡಿದರು.
ಫೆ. 25ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಘಟಿಕೋತ್ಸವದಲ್ಲಿ 1832 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ ಎಂದು ಅವರು ತಿಳಿಸಿದರು.
1081 ಬಿಇ ವಿದ್ಯಾರ್ಥಿಗಳು 63 ಬಿ ಸಿ ಎ ವಿದ್ಯಾರ್ಥಿಗಳು, 99 ಎಂ.ಟೆಕ್ ವಿದ್ಯಾರ್ಥಿಗಳು 118 ಮಂದಿ ಎಂಸಿಎ ವಿದ್ಯಾರ್ಥಿಗಳು ,161 ಮಂದಿ ಎಂ ಎಸ್ ಸಿ ವಿದ್ಯಾರ್ಥಿಗಳು, 281 ಎಂಬಿಎ ವಿದ್ಯಾರ್ಥಿಗಳು ಹಾಗೂ 29 ಮಂದಿ ಪಿಹೆಚ್ ಡಿ ಪದವಿಯನ್ನು ಪಡೆಯಲಿದ್ದಾರೆ ಎಂದು ಡಾಕ್ಟರ್ ಏನ್ ಸಂತೋಷ್ ಕುಮಾರ್ ಹೇಳಿದರು.
ಒಟ್ಟು 74 ಪದಕಗಳನ್ನು ಪ್ರದಾನ ಮಾಡಲಾಗುತ್ತಿದೆ. ಈ ಪೈಕಿ 37 ಚಿನ್ನದ ಪದಕಗಳನ್ನು ತಮ್ಮ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ,ಇದೇ ವೇಳೆ 37 ದತ್ತಿ ಪದಕಗಳನ್ನು ಶ್ರೇಷ್ಠ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಧಾನ ಮಾಡಲಾಗುವುದು ಎಂದು ತಿಳಿಸಿದರು.
ಈ ಘಟಿಕೋತ್ಸವ ಸಮಾರಂಭವು ಕುಲಾಧಿಪತಿಗಳಾದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮಿಗಳವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ಘಟಿಕೋತ್ಸವ ಭಾಷಣವನ್ನು ಬೆಂಗಳೂರಿನ ಆದರ್ಶ ಗ್ರೂಪ್ ಸಂಸ್ಥೆಯ ಅಧ್ಯಕ್ಷ ಬಿ.ಎಂ ಜಯಶಂಕರ್ ಅವರು ಮಾಡಲಿದ್ದಾರೆ ಎಂದು ಅವರು ಹೇಳಿದರು.
ಅನುಭವ ಆಧಾರಿತ ಶಿಕ್ಷಣವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಜೆಎಸ್ಎಸ್ ಎಸ್ಟಿಓ ಪ್ರಮುಖ ಸಂಸ್ಥೆಗಳೊಂದಿಗೆ ಮಹತ್ವದ ಒಪ್ಪಂದವನ್ನು ಮಾಡಿಕೊಂಡಿದೆ ಎಂದು ಸಂತೋಷ್ ಕುಮಾರ್ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಕುಲ ಸಚಿವರಾದ ಡಾ. ಎಸ್.ಎ ಧನರಾಜ್, ಪರೀಕ್ಷಾ ನಿಯಂತ್ರಕರಾದ ಡಾ. ಬಿ ನಂಜುಂಡಸ್ವಾಮಿ ಹಾಗೂ ಪ್ರಾಂಶುಪಾಲರಾದ ಡಾ. ನಟರಾಜು ಅವರು ಉಪಸ್ಥಿತರಿದ್ದರು.
