ಮೈಸೂರು: ಸರ್ವಕಲ ಸೇವಾ ಟ್ರಸ್ಟ್, ಪಿ ಜಿ ಆರ್ ಎಸ್ ಎಸ್ ಪಂಚಾಯತ್ ಗ್ರಾಮೀಣ ಅಭಿವೃದ್ಧಿ ರೈತರ ಸೇವಾ ಸಮಿತಿ ಸಹಯೋಗದಲ್ಲಿ ರಾಷ್ಟ್ರಮಟ್ಟದ ಸಪ್ತಸ್ವರ ಕರೋಕೆ ಗಾಯನ ಸೀಸನ್-3 ಹಮ್ಮಿಕೊಳ್ಳಲಾಗಿದ್ದು,ಇದರ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಪೋಸ್ಟರ್ ಅನ್ನು ಆಶ್ರಮದ ತಾಯಂದಿರ ಸಮ್ಮುಖದಲ್ಲಿ ಬಿಡುಗಡೆ ಮಾಡಿದ್ದು ವಿಶೇಷ.
ಈ ಕಾರ್ಯಕ್ರಮ ಮೇ 31 ರಂದು ನಡೆಯಲಿದ್ದು, ವಿಶೇಷ ಅತಿಥಿಗಳಾಗಿ ಮಂಗಳೂರು ಮೀನಾನಾಥ್ , ಮೈಸೂರು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ, ಯೋಗ ನರಸಿಂಹಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿ ಶ್ರೀನಿವಾಸನ್, ಕರ್ನಾಟಕ ಸುಗಮ ಸಂಗೀತ ಪರಿಷತ್ ಮೈಸೂರು ಅಧ್ಯಕ್ಷ ಡಾ. ಡಾ. ನಾಗರಾಜು ವಿ ಬೈರಿ, ಚಂದ್ರಶೇಖರ್ ರಾವ್, ಟ್ರಸ್ಟ್ ಮುಂಬೈ ಅಧ್ಯಕ್ಷ ಶ್ರೀದೇವಿ ರಾವ್ ಸೇರಿ ಹಲವಾರು ಗಣ್ಯರು ಭಾಗವಹಿಸುವರು.
ಗಾಯಕ, ಗಾಯಕರಿಗೆ ವೇದಿಕೆ ಕಲ್ಪಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಎಲ್ಲಾ ಜಿಲ್ಲೆಯಲ್ಲೂ ಕೂಡ ಮಾಡಿಕೊಂಡು ಬರುತ್ತಿದ್ದೇವೆ
ಮೊದಲು ಬಂದ 30 ಜನರಿಗೆ ಅವಕಾಶವಿರುತ್ತದೆ ಒಬ್ಬರಿಗೆ ಒಂದು ಸೋಲು ಒಂದು ಡುಯೆಟ್ ಸಾಂಗ್ ಕೊಡಲಾಗುವುದು.
ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗುವುದು, ಪ್ರತಿ ಸದಸ್ಯರು ನೊಂದಣಿಗಾಗಿ 700 ರೂ ನೀಡಬೇಕಿದೆ.
ಭಾಗವಹಿಸುವವರಿಗೆ ಪ್ರಮಾಣ ಪತ್ರ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುವುದು.
ಆಸಕ್ತರು ನೋಂದಣಿ ಮಾಡಿಸಿ ಈ ವೇದಿಕೆಯನ್ನು ಸದುಪಯೋಗಪಡಿಸಿ ಕೊಳ್ಳಬೇಕೆಂದು ಕಾರ್ಯಕ್ರಮದ ಆಯೋಜಕರಾಗಿ ಸರ್ವಕಲ ಸೇವಾ ಟ್ರಸ್ಟ್ ಅಧ್ಯಕ್ಷೆ ನೀಮ ಲೋಬೊ ಮತ್ತು ಕಾರ್ಯದರ್ಶಿ ಜೋಸೆಫ್ ಲೋಬೊ ಹಾಗೂ ಪಿ ಜಿ ಆರ್ ಎಸ್ ಎಸ್ ಪಂಚಾಯತ್ ಗ್ರಾಮೀಣ ಅಭಿವೃದ್ಧಿ ರೈತರ ಸೇವಾ ಸಮಿತಿ ಅಧ್ಯಕ್ಷ ಯಾದವ್ ಹರೀಶ್, ರಾಜ್ಯ ಸಂಚಾಲಕ ರಕ್ತದಾನಿ ಮಂಜು ಅವರು ತಿಳಿಸಿದ್ದಾರೆ.
ನೋಂದಣಿ ಮತ್ತು ಹೆಚ್ಚಿನ ಮಾಹಿತಿಗೆ- 9902175996/9740176567 ಮೊಬೈಲ್ ನಂಬರ್ ಸಂಪರ್ಕಿಸಬಹುದಾಗಿದೆ.
