ಮೈಸೂರು: ಶಾರದಾ ದೇವಿ ನಗರದ ಸುಬ್ಬರಾವ್ ಪಾರ್ಕಿನಲ್ಲಿ ಕರುಣಾ ಸೇವಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನವನ್ನು ಹಲವಾರು ಮಂದಿ ಪಡೆದುಕೊಂಡರು.
ಹುಣಸೂರು ಶಾಸಕ ಜಿ.ಡಿ. ಹರೀಶ್ ಗೌಡ,
ಮಾಜಿ ಮಹಾಪೌರರಾದ ಜಗದೀಶ್, ಜೆಡಿಎಸ್ ಅಧ್ಯಕ್ಷ ಮಂಜು, ಜೆಡಿಎಸ್ ಮುಖಂಡರಾದ ಶೇಖರ್, ಕಾಂಗ್ರೆಸ್ ಮುಖಂಡರಾದ ಹರೀಶ್ ಕುಮಾರ್. ಬಿಜೆಪಿ ಮುಖಂಡರಾದ ಅನಿಲ್ ಹಾಗೂ ಕೆಎಂಪಿಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಶಿಬಿರವನ್ನು ಉದ್ಘಾಟಿಸಿದರು.
ಶಿಬಿರದಲ್ಲಿ ಸುಮಾರು 200 ಕ್ಕೂ ಹೆಚ್ಚು ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ರಕ್ತದ ಒತ್ತಡ, ರಕ್ತದಲ್ಲಿನ ಸಕ್ಕರೆ ಪ್ರಮಾಣ, ಸಾಮಾನ್ಯ ಆರೋಗ್ಯ ತಪಾಸಣೆ ಹಾಗೂ ದಂತ ತಪಾಸಣೆ, ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಸೇರಿದಂತೆ ವಿವಿಧ ಸೇವೆಗಳನ್ನು ಉಚಿತವಾಗಿ ನೀಡಲಾಯಿತು.
ಈ ಶಿಬಿರದಲ್ಲಿ ಅಮಯ್ ಇಂಡಿಯಾ ಆಯುರ್ವೇದ ಸೆಂಟರ್, ಜೀವದಾರ ಹಾಗೂ ಸ್ಮೈಲ್ ಡೆಂಟಲ್ ಕ್ಲಿನಿಕ್ ಸಂಸ್ಥೆಗಳ ವೈದ್ಯರು ಮತ್ತು ಸಿಬ್ಬಂದಿ ಭಾಗವಹಿಸಿ ಜನರಿಗೆ ಸೂಕ್ತ ಸಲಹೆ ನೀಡಿದರು.
ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುವುದು ಈ ಶಿಬಿರದ ಮುಖ್ಯ ಉದ್ದೇಶವಾಗಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು ಎಂದು ಟ್ರಸ್ಟ್ ನ ಅಧ್ಯಕ್ಷೆ ರುಕ್ಮಿಣಿ ಕಾರ್ಯದರ್ಶಿ ಸಿಂಹರೂಪಿಣಿ
ಟ್ರಸ್ಟಿನ ಪದಾಧಿಕಾರಿಗಳಾದ
ಚಿತ್ರನಟ ಸಾಗರ್,ವಿನೋದ್, ಷಣ್ಮುಖ ಪುಷ್ಪಲತಾ ತಿಳಿಸಿದ್ದಾರೆ.
