ಬೆಂಗಳೂರು: ಬೆಂಗಳೂರಿನ ಕರ್ನಾಟಕ ಮತ್ತು ಗೋವಾ ಎನ್ಸಿಸಿ ಡೈರೆಕ್ಟರೇಟ್ ಡೆಪ್ಯೂಟಿ ಡೈರೆಕ್ಟರ್ ಜನರಲ್ ಏರ್ ಕಮಾಂಡ್ ಎಸ್ ಬಿ ಅರುಣ್ ಕುಮಾರ್ (VSM,DDG) ಅವರನ್ನು ಗೌರವಿಸಲಾಯಿತು.
ಎಸ್ ಬಿ ಅರುಣ್ ಕುಮಾರ್ ಅವರು
ಕರ್ನಾಟಕ ಮತ್ತು ಗೋವಾ ಏನ್ ಸಿ ಸಿ ಡೈರೆಕ್ಟರೇಟ್ ನವದೆಹಲಿಯ ಗಣರಾಜ್ಯೋತ್ಸವ ಪೆರೇಡ್ ನಲ್ಲಿ
2026 ರ ಪ್ರಧಾನ ಮಂತ್ರಿಗಳ ಬ್ಯಾನರನ್ನು ಗೆದ್ದ ಹಿನ್ನೆಲೆಯಲ್ಲಿ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷರು ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯರೂ ಆದ ಡಾ ಜಾನಪದ ಎಸ್ ಬಾಲಾಜಿ ಅವರು ಗೌರವಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕನ್ನಡ ಜಾನಪದ ಪರಿಷತ್ ಯಶವಂತಪುರ ವಿಧಾನಸಭಾ ಕ್ಷೇತ್ರ ಯುವ ಘಟಕದ ಅಧ್ಯಕ್ಷ ಮುನಿ ಕುಮಾರ್. ಕೆ, ಜಾನಪದ ಯುವ ಬ್ರಿಗೇಡ್ ಬೆಳಗಾವಿ ಸಂಚಾಲಕ ಮಹಾಲಿಂಗ ಬೀಸಣಕೊಪ್ಪ ಹಾಜರಿದ್ದರು.
