ಮೈಸೂರು: ಮೈಸೂರು ಜಿಲ್ಲಾ ಸರ್ಕಾರಿ ನೌಕರರ ಸಂಘ ಹೊರ ತಂದಿರುವ
2026 ನೆ ವರ್ಷದ ಕ್ಯಾಲೆಂಡರ್ ಅನ್ನು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಬಿಡುಗಡೆ ಮಾಡಲಾಯಿತು.
ಮೈಸೂರು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ. ಸಿ. ಬಿ. ಅರುಣ್ ಕುಮಾರ್ ಅವರು ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಸಂಘವು ಹೊರ ತಂದಿರುವ ಕ್ಯಾಲೆಂಡರ್ ಈ ವರ್ಷದ ಸರ್ಕಾರಿ ರಜೆ, ವಿಶೇಷ ದಿನಗಳು ಹಾಗು ಸರ್ಕಾರದ ಎಲ್ಲಾ ವಿವಿಧ ವಿಷಯಗಳ ಕುರಿತ ಮಾಹಿತಿ ಹೊಂದಿದೆ. ಇದು ಸರ್ಕಾರದ ಎಲ್ಲಾ ಇಲಾಖೆಯ ನೌಕರರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಪ್ರಾದೇಶಿಕ ಜಂಟಿ ನಿರ್ದೇಶಕ ಕಚೇರಿಯ ಸಹಾಯಕ ನಿರ್ದೇಶಕರಾದ ಎ. ಬಿ. ನಾಗೇಂದ್ರ ಪ್ರಸಾದ್ ಅವರು ಎಲ್ಲಾ ನೌಕರರಿಗೆ ಹೊಸ ವರ್ಷದ ಶುಭಾಶಯ ಕೋರಿದರು. ಅಲ್ಲದೆ, ಕ್ಯಾಲೆಂಡರ್ ಸರ್ಕಾರಿ ನೌಕರರಿಗೆ ಅನುಕೂಲ ಆಗುವ ರೀತಿ ಇದ್ದು, ಅದನ್ನು ಇಲಾಖೆ ಮಟ್ಟದ ಕೆಲಸಗಳಿಗೆ ಮತ್ತು ಸಾರ್ವಜನಿಕರ ಸೇವೆಗೆ ಅನುಕೂಲ ಆಗುವ ಹಾಗೆ ತಯಾರಿಸಲಾಗಿದೆ ಎಂದು ಅಭಿಪ್ರಾಯ ಪಟ್ಟರು.
ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಮುತ್ತುರಾಜು, ಬಿ. ಆರ್. ಬಸವರಾಜು, ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಪ್ರಾಂಶುಪಾಲಾರದ ಡಾ. ಅಬ್ದುಲ್ ರಹಿಮಾನ್ ಎಂ, ಮಹಾರಾಣಿ ಮಹಿಳಾ ವಾಣಿಜ್ಯ ಕಾಲೇಜು ಪ್ರಾಂಶುಪಾಲ ಡಾ. ನಟರಾಜ್,ಮೈಸೂರು ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಮುತ್ತುರಾಜು ಎಂ ಮತ್ತು ಬಸವರಾಜು ಬಿ ಆರ್, ಕ್ಯಾಪ್ಟನ್ ಶಿವಕುಮಾರ್ ಎಂ.ಸಿ, ಜಂಟಿ ನಿರ್ದೇಶಕರ ಕಚೇರಿ ವ್ಯವಸ್ಥಾಪಕ ಅರವಿಂದ ಎಂ.ಪಿ, ಡಾ. ರಾಜೇಶ್ವರಿ, ಡಾ. ಲೀಲಾವತಿ, ಡಾ. ರವಿಶಂಕರ್ ಡಿ. ಕೆ, ಡಾ. ಸಂತೋಷ್ ಕುಮಾರ್ ಬಿ. ಮುಂತಾದವರು ಹಾಜರಿದ್ದರು.
