ಮೈಸೂರು: ಪಂಚ ಗರುಡ ಉತ್ಸವ ಸೇವಾ ಸಮಿತಿ ವತಿಯಿಂದ ಜನವರಿ 18ರಂದು
ಮೈಸೂರಿನಲ್ಲಿ ತೃತೀಯ ಬಾರಿಗೆ ಗರುಡೋತ್ಸವ ಸಮಾರಂಭ
ದ್ವಾದಶ ( 12) ಗರುಡೋತ್ಸವ ವನ್ನು ಹಮ್ಮಿಕೊಳ್ಳಲಾಗಿದೆ.
ನಗರದ ಜಯಲಕ್ಷ್ಮಿಪುರಂ ನಲ್ಲಿರುವ ಮಹಾಜನ ವಿದ್ಯಾಸಂಸ್ಥೆ ಕ್ರೀಡಾಂಗಣದಲ್ಲಿ ತೃತೀಯ ಬಾರಿಗೆ ಗರುಡೋತ್ಸವ ಸಮಾರಂಭ
ದ್ವಾದಶ ( 12) ಗರುಡೋತ್ಸವ ವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮಕ್ಕೆ ಖ್ಯಾತ ಸಂಗೀತ ನಿರ್ದೇಶಕರಾದ ಇಳಯರಾಜ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಸಮಿತಿಯ ಗೌರವಾಧ್ಯಕ್ಷರು ಹಾಗೂ ಶಾಸಕರಾದ ಟಿ ಎಸ್ ಶ್ರೀವತ್ಸ ಅವರು ಆಹ್ವಾನ ಪತ್ರಿಕೆ ನೀಡಿ ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಕೆ ಆರ್ ಯೋಗನರಸಿಂಹ , ಶಾಂತಾ ರಾಮ್, ಕಶ್ಯಪ್, ಶ್ರೀ ರಾಮ್ ಹಾಗೂ ಸಮಿತಿಯವರು ಹಾಜರಿದ್ದರು.
