ಮೈಸೂರು: ಇದೇ ಅ.21 ರಂದು ನಡೆಯಲಿರುವ ವಿಜಯದಶಮಿ ಜಂಬೂಸವಾರಿ ಹಿನ್ನೆಲೆಯಲ್ಲಿ ಮೈಸೂರು ಅರಮನೆ ಆವರಣದಲ್ಲಿ ಗಜಪಡೆಯ ಅಂತಿಮ ತಾಲೀಮು ನಡೆಯಿತು.
ಪ್ರಶಾಂತ ನೇತೃತ್ವದ ಆನೆಗಳು ಅರಮನೆ ಆವರಣದಲ್ಲಿಯೇ ಸೆಲ್ಯೂಟ್ ತಾಲೀಮು ಹಾಗೂ ಫಿರಂಗಿ ಸದ್ದಿನ ತಾಲೀಮು ನಡೆಸಿದವು. ಪ್ರಶಾಂತನೇ ಈ ಬಾರಿಯ ಜಂಬೂಸವಾರಿ ನೇತೃತ್ವ ವಹಿಸಲಿದ್ದಾನೆ.
ಈ ಸಂದರ್ಭದಲ್ಲಿ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಹಾಗೂ ಅರಣ್ಯಾಧಿಕಾರಿಗಳು ಹಾಜರಿದ್ದರು.
