ಯಳಂದೂರು: ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಅ.24 ಮತ್ತು 25ರಂದು ನಡೆಯಲಿರುವ 2ನೇ ಅಂತರರಾಷ್ಟ್ರೀಯ ಬೌದ್ಧ ಸಮ್ಮೇಳನಕ್ಕೆಯಳಂದೂರು ತಾಲ್ಲೂಕಿನ ಹೊನ್ನೂರು ಬೀಚಹಳ್ಳಿ ಗ್ರಾಮದ ಜನತೆ ದೇಣಿಗೆ ನೀಡಿದ್ದಾರೆ.
ಮನೆ,ಮನೆಗಳಿಂದ ಸಂಗ್ರಹ ಮಾಡಿದ ದೇಣಿಗೆಯನ್ನು ಗ್ರಾಮದ ಯಜಮಾನರು ಹಾಗೂ ಮುಖಂಡರು ಗ್ರಾಮದಲ್ಲಿ ಒಟ್ಟು 55101 ರೂ ಗಳನ್ನು ಶಾಸಕ ಎ.ಆರ್.ಕೃಷ್ಣಮೂರ್ತಿ ಅವರಿಗೆ ಹಸ್ತಾಂತರಿಸಿದರು.
ಈ ವೇಳೆ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಯೋಜಿಸಲು ಎಲ್ಲರ ಸಹಕಾರ ಅಗತ್ಯ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.
ಈ ಸಂದರ್ಭದಲ್ಲಿ ಯಜಮಾನರಾದ ಎಂ ಗುರುಪ್ರಸಾದ್, ತಾಲೋಕು ಪಂಚಾಯತಿ ಮಾಜಿ ಅಧ್ಯಕ್ಷ ಎಂ. ನಿರಂಜನ್,
ಮುಖಂಡರಾದ ಡಿ. ರೇವಣ್ಣ, ರಾಜಶೇಖರ್, ಆರ್,ಗುರುಮಲ್ಲೇಶ್,ಹೆಚ್ ಆರ್. ನಾಗರಾಜು, ಮಹದೇವಸ್ವಾಮಿ, ಕುಮಾರಸ್ವಾಮಿ, ಆರ್. ಪುಟ್ಟಬಸವಯ್ಯ,ಪಿ. ಮೋಹನ್, ಕೃಷ್ಣಮೂರ್ತಿ ಮತ್ತಿತರರು ಹಾಜರಿದ್ದರು.
