ಇಸ್ರೇಲ್: ಕದನ ವಿರಾಮ ಇದ್ದರೂ, ಇಸ್ರೇಲ್ ಶನಿವಾರ ನಡೆಸಿದ ದಾಳಿಯಲ್ಲಿ 12 ಮಂದಿ ಪ್ಯಾಲೆಸ್ಟೀನಿಯನ್ನರು ಸಾವಿಗೀಡಾಗಿದ್ದಾರೆ.
ಇದು ಕಳೆದ ವರ್ಷ ಘೋಷಿಸಿದ ಕದನ ತಡೆ ಬಳಿಕದ ಅತಿ ಹೆಚ್ಚಿನ ಸಾವು ಎಂದು ಅಧಿಕಾರಿಗಳು ಹೇಳಿದ್ದಾರೆ.
ಉತ್ತರ ಮತ್ತು ದಕ್ಷಿಣ ಗಾಜಾದ ಕೆಲ ಸ್ಥಳಗಳ ಮೇಲೆ ದಾಳಿ ಮಾಡಲಾಗಿ. ಇದರಲ್ಲಿ ಗಾಜಾ ನಗರದ ಅಪಾರ್ಟ್ ಮೆಂಟ್ ಕಟ್ಟಡ ಮತ್ತು ಖಾನ್ ಯೂನಿಸ್ನಲ್ಲಿರುವ ಟೆಂಟ್ ನಾಶವಾಗಿವೆ.ಇಲ್ಲಿ ಎರಡು ಕುಟುಂಬಗಳ ಇಬ್ಬರು ಮಹಿಳೆಯರು ಮತ್ತು ಆರು ಮಕ್ಕಳ ಮೃತ ದೇಹಗಳನಯ ಹೊರತೆಗೆಯಲಾಗಿದೆ ಎಂದು ಗಾಜಾ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಗಾಜಾದ ದಕ್ಷಿಣ ನಗರವಾದ ರಾಫಾದ ಗಡಿ ತೆರೆಯಲು ಇಸ್ರೇಲ್ ಒಪ್ಪಿಕೊಂಡ ಮರು ದಿನವೇ ಈ ದಾಳಿಗಳನ್ನು ನಡೆಸಿದೆ. ಇದು ಕದನ ವಿರಾಮ ಉಲ್ಲಂಘನೆಯಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎಂದಿದ್ದಾರೆ.
ಹಮಾಸ್ ಮತ್ತು ಇಸ್ರೇಲ್ ಪಡೆಗಳ ನಡುವೆ ಯುದ್ಧ ಪ್ರಾರಂಭವಾದಾಗಿನಿಂದ ಗಾಜಾಗೆ ಸಂಪರ್ಕಿಸುವ ಎಲ್ಲ ಗಡಿಗಳನ್ನು ಮುಚ್ಚಲಾಗಿತ್ತು. ಗಾಯಾಳು ಪ್ಯಾಲೆಸ್ಟೀನಿಯನ್ನರು ರಾಫಾ ಗಡಿ ದಾಟಿ ಈಜಿಪ್ಟ್ನಲ್ಲಿ ಚಿಕಿತ್ಸೆ ಪಡೆಯಲು ತೆರಳುತ್ತಿದ್ದರು.
ಇದು ಜನರ ಕೊನೆಯ ಆಯ್ಕೆಯಾಗಿತ್ತು. ಇದೀಗ, ಅಲ್ಲಿಯೇ ದಾಳಿ ನಡೆಸುವ ವೈದ್ಯಕೀಯ ಮೂಲಸೌಕರ್ಯಗಳನ್ನು ನಾಶ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಅಕ್ಟೋಬರ್ 10 ರಂದು ಕದನ ವಿರಾಮ ಚಾಲ್ತಿಗೆ ಬಂದ ನಂತರ ಇಸ್ರೇಲ್ ದಾಳಿಗೆ 500ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಹೇಳಿದೆ.
ಹಮಾಸ್ ನೇತೃತ್ವದ ಸರ್ಕಾರದ ಭಾಗವಾಗಿರುವ ಸಚಿವಾಲಯವು, ವಿಶ್ವಸಂಸ್ಥೆಯ ಸಂಸ್ಥೆಗಳು ಮತ್ತು ಸ್ವತಂತ್ರ ತಜ್ಞರಿಂದ ಒಳಗೊಂಡಿದ್ದರು, ಸಾಮಾನ್ಯವಾಗಿ ಸಾವು – ನೋವಿನ ಬಗ್ಗೆ ವಿಶ್ವಾಸಾರ್ಹ ಮಾಹಿತಿ ನೀಡುತ್ತದೆ ಎಂದು ನಂಬಲಾಗಿದೆ.
ಗಾಜಾದ ಮೇಲಿನ ದಾಳಿ ಮತ್ತು ಸಾವು ನೋವುಗಳ ಬಗ್ಗೆ ಇಸ್ರೇಲ್ ಸೇನೆ ಯಾವುದೇ ಮಾಹಿತಿ ನೀಡಿಲ್ಲ.
