ಗ್ಯಾಲೆ: ಶ್ರೀಲಂಕಾದ ಕರಾವಳಿಯಲ್ಲಿ ಬುಧವಾರ ಅಮೆರಿಕದ ಜಲಾಂತರ್ಗಾಮಿ ನೌಕೆ ಇರಾನ್ ಯುದ್ಧನೌಕೆ ಮೇಲೆ ದಾಳಿ ನಡೆಸಿ ಮುಳುಗಿಸಿಬಿಟ್ಟಿದೆ.
ಈ ವೇಳೆ ಯುದ್ಧನೌಕೆ ಮುಳುಗಿ ಕನಿಷ್ಠ 87 ನಾವಿಕರು ಮೃತಪಟ್ಟಿದ್ದಾರೆ, ಬಹಳಷ್ಟು ಮಂದಿ ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಆದರೆ ಅಮೇರಿಕಾ ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿಲ್ಲ.
ಇರಾನ್ ಮೇಲೆ ಅಮೆರಿಕ-ಇಸ್ರೇಲ್ ನಡೆಸಿದ ಜಂಟಿ ದಾಳಿಯಿಂದ ಆರಂಭವಾದ ಯುದ್ಧವು ದಿನೆ,ದಿನೇ ತೀವ್ರಗೊಳ್ಳುತ್ತಿದೆ.
ಇರಾನ್ ಯುದ್ಧನೌಕೆಯನ್ನು ಅಮೆರಿಕದ ಜಲಾಂತರ್ಗಾಮಿ ನೌಕೆ ಟಾರ್ಪಿಡೊ ಮುಳುಗಿಸಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ತಿಳಿಸಿದ್ದಾರೆ.
ಪೀಟ್ ಹೆಗ್ಸೆತ್ ಅವರು ಎರಡನೇ ಮಹಾಯುದ್ಧದ ನಂತರ ಅಮೆರಿಕವು ಟಾರ್ಪಿಡೊದಿಂದ ಶತ್ರು ಹಡಗನ್ನು ಮುಳುಗಿಸಿದ ಮೊದಲ ಘಟನೆ ಇದಾಗಿದೆ,ಆ ಯುದ್ಧದಂತೆ ಈ ಯುದ್ಧ”ನಾವು ಗೆಲ್ಲಲು ಹೋರಾಡುತ್ತಿದ್ದೇವೆ” ಎಂದು ಹೇಳಿದ್ದಾರೆ.
ಶ್ರೀಲಂಕಾ ನೌಕಾಪಡೆಯು ದಕ್ಷಿಣ ನಗರದ ಗ್ಯಾಲೆ ಬಳಿಯ ನೀರಿನಿಂದ 87 ನಾವಿಕರ ಶವಗಳನ್ನು ಹೊರ ತೆಗೆದಿದೆ ಎಂದು ಶ್ರೀಲಂಕಾ ನೌಕಾ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ. 61 ಮಂದಿ ಇನ್ನೂ ಕಾಣೆಯಾಗಿದ್ದಾರೆ ಎಂದು ಪೊಲೀಸರು ಮತ್ತು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
