ಇರಾನ್: ಇರಾನ್ ಮತ್ತು ಅಮೆರಿಕ ಹಾಗೂ ಅದರ ಮಿತ್ರರಾಷ್ಟ್ರಗಳ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿರುವ ಬೆನ್ನಲ್ಲೇ ಇರಾನ್ನಲ್ಲಿ ಅಮೆರಿಕದ ಎರಡನೇ ಎಫ್ 35 ಯುದ್ಧ ವಿಮಾನವನ್ನು ಉರುಳಿಸಿದೆ.
ವಿಮಾನ ಹಡೆದುರುಳಿಸಿದ್ದೇವೆ ಎಂದು ಹೇಳಿಕೊಂಡಿರುವ ಇರಾನ್, ಪೈಲಟ್ ಕತೆ ಏನಾಗಿದೆ ಎಂದು ತಿಳಿಸಿಲ್ಲ.
ಈ ನಡುವೆ, ಕೊಲ್ಲಿ ವಲಯಾದ್ಯಂತ ದಾಳಿಗಳು ವಿಸ್ತರಿಸುವ ಭೀತಿ ಎದುರಾಗಿದ್ದು, ವಿವಿಧ ರಾಷ್ಟ್ರಗಳ ಸೇನಾ ವರದಿಗಳು ಮತ್ತು ನಾಯಕರ ಹೇಳಿಕೆಗಳು ಪ್ರಾದೇಶಿಕ ಅಸ್ಥಿರತೆಯ ಮುನ್ಸೂಚನೆ ನೀಡಿವೆ.
ಜೋರ್ಡಾನ್ನಲ್ಲಿರುವ ಅಮೆರಿಕದ ನೆಲೆಗಳ ಮೇಲೆ ಡ್ರೋನ್ ದಾಳಿ
ಜೋರ್ಡಾನ್ನ ಅಲ್ ಅಜ್ರಾಕ್ (Al Azraq) ನೆಲೆಯಲ್ಲಿರುವ ಅಮೆರಿಕದ ಯುದ್ಧ ವಿಮಾನಗಳ ಮೇಲೆ ಡ್ರೋನ್ ದಾಳಿ ನಡೆಸಿರುವುದಾಗಿ ಇರಾನ್ ತಿಳಿಸಿದೆ.
ಅಲ್ಲದೆ, ಕುವೈತ್, ಸೌದಿ ಅರೇಬಿಯಾ, ಅಬುಧಾಬಿ ಮತ್ತು ಜೋರ್ಡಾನ್ನ ಹಲವಾರು ಸೇತುವೆಗಳನ್ನು ಭವಿಷ್ಯದ ಸೇನಾ ಕಾರ್ಯಾಚರಣೆಗಳ ಸಂಭಾವ್ಯ ಗುರಿಗಳಾಗಿ ಮಾಡಿಕೊಂಡಿದೆ ಇರಾನ್.
