ಇರಾನ್: ಅಮೆರಿಕದ ಪ್ರಮುಖ ಮತ್ತು ಐದನೇ ತಲೆಮಾರಿನ ಯುದ್ಧ ವಿಮಾನ ಎಫ್ -35 ಲೈಟ್ನಿಂಗ್ 2 ಅನ್ನು ಹೊಡೆದುರುಳಿಸಿದ್ದೇವೆ ಎಂದು ಇರಾನ್ ಹೇಳಿದೆ.
ಜತೆಗೆ ಈ ವಿಮಾನದ ಮೇಲೆ ದಾಳಿ ಮಾಡಿರುವ ಮೊದಲ ರಾಷ್ಟ್ರ ನಾವು ಎಂದು ತಿಳಿಸಿದೆ.
ಇರಾನ್ ಮೇಲಿನ ಯುದ್ಧದಲ್ಲಿ ಅಮೆರಿಕ ಈಗಾಗಲೇ 19 ಲೈಟ್ನಿಂಗ್ 2 ಯುದ್ಧ ವಿಮಾನ ಹಾರಿಸಿದ್ದು, ಮತ್ತಷ್ಟು ಯುದ್ಧ ವಿಮಾನಗಳಿಂದ ದಾಳಿ ನಡೆಸುವ ಸಾಧ್ಯತೆ ಇದೆ. ಯುದ್ದ ಸಾಮರ್ಥ್ಯ ಹೊಂದಿರುವ ಈ ವಿಮಾನಕ್ಕೆ ಅಮೆರಿಕ ಮಿತ್ರರಾಷ್ಟ್ರಗಳಿಂದಲೂ ಸಾಕಷ್ಟು ಬೇಡಿಕೆ ಇದೆ.
ಅಮೆರಿಕದ ರಕ್ಷಣಾ ಅಧಿಕಾರಿಗಳು ಕೂಡ ಇರಾನ್ ಕ್ಷಿಪಣಿ ದಾಳಿಯ ನಂತರ ಎಫ್ 35 ತುರ್ತು ಭೂ ಸ್ಪರ್ಶ ಮಾಡಿದೆ. ಪೈಲಟ್ ಸುರಕ್ಷಿತವಾಗಿದ್ದು, ತನಿಖೆ ಸಾಗಿದೆ ಎಂದು ದೃಢಪಡಿಸಿದ್ದಾರೆ.
ಇರಾನಿನ ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ ಕಾರ್ಪ್ಸ್ (ಐಆರ್ಜಿಸಿ), ತಾವು ಯಶಸ್ವಿಯಾಗಿ ಅಮೆರಿಕದ ಎಫ್15ನ್ನು ಇರಾನ್ ವಾಯು ಪ್ರದೇಶದಲ್ಲಿ ಹೊಡೆದುರುಳಿಸಿದ್ದೇವೆ ಎಂದಿದ್ದಾರೆ.
ಗುರುವಾರ ಮುಂಜಾನೆ 2.50ರಲ್ಲಿ ಐಆರ್ಜಿಸಿ ಸುಧಾರಿತ ಆಧುನಿಕ ವಾಯು ರಕ್ಷಣಾ ವ್ಯವಸ್ಥೆಯಿಂದ ಈ ಕಾರ್ಯಾಚರಣೆ ನಡೆಸಲಾಗಿದೆ. ಅಮೆರಿಕ ಯುದ್ಧ ವಿಮಾನದ ಮೇಲೆ ದಾಳಿ ಮಾಡಲಾಗಿದೆ.
ಇರಾನ್ನ ರಕ್ಷಣಾ ವ್ಯವಸ್ಥೆ ಈಗಾಗಲೇ 125 ಕ್ಕೂ ಹೆಚ್ಚು ಯುಎಸ್ ಇಸ್ರೇಲಿ ಡ್ರೋನ್ಗಳನ್ನು ಹೊಡೆದುರುಳಿಸಿದೆ.
ಎಫ್ 15 ಯುದ್ದ ವಿಮಾನ ಅಮೆರಿಕದ ನಿರ್ಣಾಯಕ ಶಕ್ತಿಯನ್ನು ತೋರಿಸುತ್ತದೆ ಎಂದು ತಿಳಿಸಿದ ಮರುದಿನವೇ ಈ ದಾಳಿ ನಡೆದಿದೆ.
ಅಮೆರಿಕದ ಎಫ್ 35 ಫೈಟರ್ ಮೇಲೆ ಇರಾನ್ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ಹೇಳಿದೆ.
ಯುಎಸ್ ಸೆಂಟ್ರಲ್ ಕಮಾಂಡ್ ವಕ್ತಾರ ಕ್ಯಾಪ್ಟನ್ ಟಿಮ್ ಹಾಕಿನ್ಸ್ ಹೇಳಿಕೆ ಉಲ್ಲೇಖಿಸಿರುವ ಸಿಎನ್ಎನ್, ಇರಾನ್ ಮೇಲೆ ಯುದ್ಧ ಕಾರ್ಯಾಚರಣೆಯಲ್ಲಿ ಐದನೇ ಪೀಳಿಗೆಯ ಸ್ಟೆಲ್ತ್ ಯುದ್ದ ವಿಮಾನ ಭಾಗಿಯಾಗಿತ್ತು. ಯುದ್ದ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು, ಪೈಲಟ್ ಸ್ಥಿತಿ ಸ್ಥಿರವಾಗಿದೆ. ಈ ಘಟನೆಯನ್ನು ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ
ಇರಾನ್ – ಇಸ್ರೇಲ್- ಯುಎಸ್ ನಡುವಿನ ಸೇನಾ ಸಂಘರ್ಷದಲ್ಲಿ ಅಮೆರಿಕ ಮತ್ತು ಇಸ್ರೇಲ್ ಎರಡೂ ದೇಶಗಳು ಎಫ್ 35 ಫೈಟರ್ ಜೆಟ್ ಅನ್ನು ನಿಯೋಜಿಸಿದೆ. ಈ ಯುದ್ದ ವಿಮಾನವೂ ಜಗತ್ತಿನ ಪ್ರಮುಖ ಸುಧಾರಿತ ವಿಮಾನವಾಗಿದ್ದು, ಇದರ ವೆಚ್ಚ 100 ಮಿಲಿಯನ್ ಡಾಲರ್.
