ಸೇಲಂ: ಸೇಲಂ ರಾಷ್ಟ್ರೀಯ ಹೆದ್ದಾರಿ, ಉತ್ತಮ ಸೋಲಪುರಂ ಬಳಿ ಅರಿಯನೂರು ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ ಎಂಟು ಮಂದಿ ಮೃತಪಟ್ಟಿದ್ದಾರೆ.
ತಮಿಳುನಾಡು ರಾಜ್ಯ ಸಾರಿಗೆ ನಿಗಮ ಬಸ್ ಚಾಲಕನ ನಿಯಂತ್ರಣ ತಪ್ಪಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.
40 ಕ್ಕೂ ಹೆಚ್ಚು ಪ್ರಯಾಣಿಕರೊಂದಿಗೆ ಕೊಯಮತ್ತೂರಿನಿಂದ ಸೇಲಂಗೆ ಪ್ರಯಾಣಿಸುತ್ತಿದ್ದ ಬಸ್, ಮಾರ್ಗವನ್ನು ಬಿಟ್ಟು, ರಸ್ತೆ ಮಧ್ಯಭಾಗವನ್ನು ದಾಟಿ, ವಿರುದ್ಧ ದಿಕ್ಕಿಗೆ ನುಗ್ಗಿ ಟೆಂಪೊ ಮತ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಟೆಂಪೊದಲ್ಲಿ 10 ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು.
ಸೆಲ್ವರಾಜ್, ಮುರುಗನ್, ಅಮುಧಾ, ಮಣಿಕಂದನ್, ಇರುಸಾಯಿ, ಸತ್ಯ (ಮಣಿಕಂದನ್ ಅವರ ಪತ್ನಿ), ಐದು ವರ್ಷದ ನಿತೀಶಾ ಮತ್ತು 11 ತಿಂಗಳ ಮಗು ಜೀವಿಕಾ ಮೃತರು.
ಇತರ ಹಲವರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾಗಿದೆಯೆ ಅಥವಾ ಯಾಂತ್ರಿಕ ವೈಫಲ್ಯದಿಂದ ಆಗಿದೆಯಾ ಎಂಬುದರ ಕುರಿತು ತನಿಖೆ ನಡೆಯುತ್ತಿದೆ.
