ಮೈಸೂರು: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯವು ಹುತಾತ್ಮರ ದಿನಾಚರಣೆ ಆಚರಿಸಿತು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದವರ ಜ್ಞಾಪಕಾರ್ಥವಾಗಿ ಹುತಾತ್ಮರ ದಿನಾಚರಣೆಯನ್ನು ಸರ್ದಾರ್ ವಲ್ಲಭಬಾಯಿ ಪಟೇಲ್ನಗರದಲ್ಲಿರುವ ವಿವಿಯ ನೂತನ ಕ್ಯಾಂಪಸ್ ಆವರಣದಲ್ಲಿ ಕುಲಪತಿ ಪ್ರೊ. ನಾಗೇಶ್ ವಿ ಬೆಟಕೋಟೆಯವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.
ಮೌಲ್ಯಮಾಪನ ಕುಲಸಚಿವರು ಹಾಗೂ ಹಣಕಾಸು ಅಧಿಕಾರಿಗಳು ಮಹಾತ್ಮ ಗಾಂದೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡುವುದರ ಮೂಲಕ ಹುತಾತ್ಮರಿಗೆ ಗೌರವ ನಮನ ಸಲ್ಲಿಸಿದರು.
ವಿವಿಯ ಮೌಲ್ಯಮಾಪನ ಕುಲಸಚಿವರಾದ ಪ್ರೊ.ಎಂ.ಜಿ ಮಂಜುನಾಥ ಅವರು ಹುತಾತ್ಮರನ್ನು ಕುರಿತು ದೇಶಪ್ರೇಮದ ಹಿತನುಡಿಗಳನ್ನು ಹೇಳಿದರು.
ಈ ಸಂದರ್ಭದಲ್ಲಿ ಕುಲಪತಿಗಳು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹಾನ್ ನಾಯಕರುಗಳಾದ ಸುಭಾಷ್ ಚಂದ್ರಭೋಸ್, ಭಗತ್ಸಿಂಗ್, ರಾಜ್ಗುರು ಹಾಗೂ ಇನ್ನೂ ಅನೇಕ ಹೋರಾಟಗಾರರನ್ನು ಸ್ಮರಿಸಿದರು.
ಗಾಂಧೀಜಿಯವರು ನನ್ನ ಬದುಕೇ ನನ್ನ ಜೀವನದ ಸಂದೇಶ ಎಂದು ಹೇಳಿರುವುದನ್ನು ನೆನಪು ಮಾಡಿಕೊಂಡು ಗಾಂಧೀಜಿಯವರ ಬದುಕಿನ ದ್ಯೇಯವನ್ನು ತಿಳಿಸಿದರು.
ಪ್ರತಿಯೊಬ್ಬರು ಇಂತಹ ಮಹಾನ್ ನಾಯಕರುಗಳ ಜೀವನ ಶೈಲಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತೀ ಮುಖ್ಯ ಹಾಗೂ ನಾವು ಸಮಾಜಕ್ಕಾಗಿ, ದೇಶಕ್ಕಾಗಿ ನೀಡಿದ ಕೊಡುಗೆಯೇ ನಮ್ಮನ್ನು ಸಮಾಜದಲ್ಲಿ ಗುರುತಿಸುವುದು ಎಂದು ಹೇಳಿದರು.
ನಂತರ ಎರಡು ನಿಮಿಷಗಳ ಮೌನಾಚರಣೆ ಮಾಡಲಾಯಿತು.
