ಹುಣಸೂರು: ನಾಡಿನ ಹೆಸರಾಂತ ಮುಖ್ಯ ಮಂತ್ರಿ ಡಿ. ದೇವರಾಜ ಅರಸು ಅವರ 42 ನೆ ಪುಣ್ಯ ಸ್ಮರಣೆಯನ್ನು ಹುಣಸೂರಿನ ದೇವರಾಜ ಅರಸು ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂದು ಮೊದಲ ಬಾರಿಗೆ ವೈದ್ಯರೆಲ್ಲ ಸೇರಿ ಆಚರಿಸಿದ್ದು ವಿಶೇಷವಾಗಿತ್ತು.
ಹುಣಸೂರಿಗೆ ಈ ಸಾರ್ವಜನಿಕ ಆಸ್ಪತ್ರೆ ಬರಲು ಡಿ ದೇವರಾಜ ಅರಸು ಅವರೇ ಮುಖ್ಯ ಕಾರಣ.ಈ ಆಸ್ಪತ್ರೆಯಿಂದ ತಾಲೂಕಿನಾದ್ಯಂತ ಬಹಳಷ್ಟು ಗ್ರಾಮಗಳ ಜನರಿಗೆ ತುಂಬಾ ಅನುಕೂಲವಾಗಿದೆ.ಇಲ್ಲಿನ ವೈದ್ಯರ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ಆದರೆ ಈ ಆಸ್ಪತ್ರೆಯಲ್ಲಿ ಅರಸು ಅವರ ಪಣ್ಯಸ್ಮರಣೆ ಯಾರೂ ಮಾಡಿತ್ತಿರಲಿಲ್ಲ ಎಂಬುದು ವಿಷಾದನೀಯ.
ಆದರೆ ಈ ಬಾರಿ ಕರ್ನಾಟಕ ಪ್ರಜಾ ಪಾರ್ಟಿ ರೈತಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಅವರು ಆಸ್ಪತ್ರೆಯ ವೈದ್ಯರ ಮೇಲೆ ಒತ್ತಡ ಹೇರಿ ಈ ಆಸ್ಪತ್ರೆಯಲ್ಲಿ ದೇವರಾಜ ಅರಸು ಅವರ ಪುಣ್ಯ ಸ್ಮರಣೆ ಆಗಲೇ ಬೇಕೆಂದು ಪಟ್ಟು ಹಿಡಿದ ಕಾರಣ ಆಸ್ಪತ್ರೆಯ ಎಲ್ಲಾ ವೈದ್ಯರು ಹಾಗೂ ಸಿಬ್ಬಂದಿ ಮಾಜಿ ಮುಖ್ಯ ಮಂತ್ರಿಗಳ ನೆನಪಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ನಿಜಕ್ಕೂ ಒಳ್ಳೆಯ ಬೆಳವಣಿಗೆ.
ಆಸ್ಪತ್ರೆಯ ವೈದ್ಯರುಗಳು ದೇವರಾಜ ಅರಸು ಅವರ ಭಾವಚಿತ್ರವನ್ನು ತಂದು ಅದನ್ನು ಇಟ್ಟು ಪೂಜೆ ಮಾಡಿ ಅರಸು ಅವರಿಗೆ ಪುಷ್ಪ ನಮನ ಸಲ್ಲಿಸಿದರು.
ನಂತರ ವೈದ್ಯರು ಎಲ್ಲರಿಗೂ ಸಿಹಿ ವಿತರಿಸಿದರು. ಇದೇ ವೇಳೆ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಅವರ ನೇತೃತ್ವದಲ್ಲಿ ವೈದ್ಯರ ಸಹಕಾರದಲ್ಲಿ ಸುಮಾರು 25ಕ್ಕೂ ಹೆಚ್ಚು ವೃದ್ಧ ಮಹಿಳೆಯರಿಗೆ ಆಹಾರದ ಕಿಟ್ ಗಳನ್ನು ವಿತರಿಸಿದ್ದು ಅರ್ಥಪೂರ್ಣವಾಗಿತ್ತು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಶಿವಶಂಕರ್ ಪಿ, ಹಿರಿಯ ತಜ್ಞರಾದ ಡಾ. ಉಮೇಶ್ ಹೆಚ್ ಬಿ, ಡಾ. ಸತೀಶ್ ಕುಮಾರ್ ಎನ್, ದಂತ ವೈದ್ಯಾಧಿಕಾರಿ ಡಾ. ರಘು ಎಚ್ ಎಚ್, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಡಾ.ದೀಪ್ತಿ ಸಿ ಎಲ್, ಸಹಾಯಕ ಆಡಳಿತ ಅಧಿಕಾರಿ ಮೋಹನ್ ಟಿ ಎಂ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಪ್ರಭಾಕರ್ ಹಾಗೂ ಡಾ. ಕೌಶಿಕ್, ಡಾ. ಹರ್ಷ, ಡಾ.ಅನಿಲ್ ಕುಮಾರ್, ಆಯುರ್ವೇದ ವೈದ್ಯಧಿಕಾರಿ
ಡಾ. ಪರಮೇಶ್,ಸೀನಿಯರ್ ಫಾರ್ಮಸಿಸ್ಟ್ ಪ್ರಶಾಂತ್,ಶುಶ್ರೂಕ ಅಧೀಕ್ಷರಾದ ಕಣ್ಣಮ್ಮ,ಯಶೋಧ ಕುಮಾರಿ ಮತ್ತಿತರ ಸಿಬ್ಬಂದಿ ಹಾಜರಿದ್ದರು.
