ಮೈಸೂರು: ನೂತನ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ರಾಜ್ಯದಲ್ಲಿ ನಡೆಯುತ್ತಿರುವ ರೌಡಿ ಚಟುವಟಿಕೆಗಳನ್ನು ಮಟ್ಟಹಾಕಲು ರೌಡಿ ನಿಗ್ರಹ ಪಡೆ ರಚನೆ ಮಾಡಿರುವುದನ್ನು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ಸ್ವಾಗತಿಸಿದ್ದಾರೆ.
ನಾನು ಅನೇಕ ವರ್ಷಗಳಿಂದ ರೌಡಿ ಚಟುವಟಿಕೆ ವಿರುದ್ಧ ಹೋರಾಟಗಳನ್ನು ನಡೆಸುತ್ತ ಬಂದಿದ್ದೇನೆ, ಅನೇಕ ಬಾರಿ ರಾಜ್ಯ ಸರ್ಕಾರ ಮತ್ತು ಪೋಲಿಸ್ ಇಲಾಖೆಗೆ ರೌಡಿ ನಿಗ್ರಹ ಪಡೆ ಸ್ಥಾಪಿಸುವಂತೆ ಮನವಿ ಕೂಡಾ ಮಾಡಿದ್ದೆ,ಈಗ ರೌಡಿ ನಿಗ್ರಹ ಪಡೆ ರಚನೆ ಆಗಿರುವುದು ಸಂತಸ ತಂದಿದೆ ಎಂದು ತೇಜಸ್ವಿ ನಾಗಲಿಂಗಸ್ವಾಮಿ ತಿಳಿಸಿದ್ದಾರೆ
ಈ ರೌಡಿ ನಿಗ್ರಹ ಪಡೆ ರಚನೆಯಿಂದ ಜನ ಸಾಮಾನ್ಯರಿಗೆ ಬೆದರಿಕೆ ಹಾಕುವುದು, ಹಫ್ತಾ ವಸೂಲಿ ಮಾಡುವವರು ಮತ್ತು ಸಮಾಜದಲ್ಲಿ ಆತಂಕ ಉಂಟುಮಾಡುವವರ ಎದೆಯಲ್ಲಿ ನಡುಕ ಶುರುವಾಗುತ್ತದೆ ಎಂದು ಹೇಳಿದ್ದಾರೆ.
ಸರ್ಕಾರದ ಈ ನಿರ್ಧಾರದಿಂದ ರೌಡಿ ಚಟುವಟಿಕೆ ಮಟ್ಟಹಾಕಲು ಅನುಕೂಲವಾಗುತ್ತದೆ ಮತ್ತು ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ ಎಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ತಿಳಿಸಿದ್ದಾರೆ.
ಈ ರೀತಿಯ ದಿಟ್ಟ ನಿರ್ಧಾರ ಕೈಗೊಂಡ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
