ಮೈಸೂರು: ಭಗೀರಥ ಚಲನಚಿತ್ರ ಬಿಡುಗಡೆಯಾಗಿ ಒಂದು ವರ್ಷ ಕಳೆದ ಹಿನ್ನೆಲೆಯಲ್ಲಿ ಭಗೀರಥ ಚಲನಚಿತ್ರದ ನಾಯಕ ನಟನಿಗೆ ಮೈಸೂರಿನಲ್ಲಿ ವಿವಿಧ ಸಂಘ ಸಂಸ್ಥೆಗಳು ಅಭಿನಂದಿಸಿದವು.
ಭಗೀರಥ ಚಿತ್ರದ ನಾಯಕ ನಟರಾದ ಡೇರಿಂಗ್ ಸ್ಟಾರ್ ಎಸ್ ಜಯಪ್ರಕಾಶ್ ಅವರನ್ನು ವಿವಿಧ ಸಂಘ ಸಂಸ್ಥೆಗಳ ಪರವಾಗಿ ಹಿರಿಯ ಸಮಾಜ ಸೇವಕರಾದ ಡಾ. ರಘುರಾಂ ಕೆ ವಾಜಪೇಯಿ ಅವರು ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ತೇಜೇಶ್ ಲೋಕೇಶ್ ಗೌಡ, ಪ್ರಭಾಕರ್, ಬೋಗಾದಿ ಸಿದ್ದೇಗೌಡ, ಕೃಷ್ಣಪ್ಪ, ಹನುಮಂತಯ್ಯ, ಸಿಂದುವಳ್ಳಿ ಶಿವಕುಮಾರ್, ನೇಹಾ, ಭಾಗ್ಯಮ್ಮ, ಜೋತಿ, ಸುಜಾತಾ, ನಾರಾಯಣ ಗೌಡ,ಅಶೋಕ್ ಕುಮಾರ್, ರಘು ಅರಸ್, ಇಂದಿರಾ, ವಾಣಿ, ಗೀತಾ, ರವೀಶ್, ರವಿ ನಾಯಕ್, ಗಣೇಶ್ ಪ್ರಸಾದ್, ಶಿವರಾಂ, ಪ್ರದೀಪ್ ಮತ್ತಿತರರು ಹಾಜರಿದ್ದು ಎಸ್ ಜಯಪ್ರಕಾಶ್ ಅವರಿಗೆ ಶುಭ ಕೋರಿದರು.
