ಮೈಸೂರು: ಪಿರಿಯಾಪಟ್ಟಣ ತಾಲೂಕು ಕಾಯಕ ಸಮಾಜದ ಒಕ್ಕೂಟಕ್ಕೆ ಸಂಘಟನಾ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ಮಾರ್ಕೊಡು ಬಸವರಾಜ್ ಅವರಿಗೆ ಮೈಸೂರಿನಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕಾಯಕ ಸಮಾಜದ ವತಿಯಿಂದ ಮೈಸೂರಿನ ಜಲದರ್ಶನಿಯಲ್ಲಿ ಮಾರ್ಕೊಡು ಬಸವರಾಜ್ ರವರಿಗೆ ಗೌರವಿಸಲಾಯಿತು.
ಕಾಯಕ ಸಮಾಜಗಳ ಒಕ್ಕೂಟದ ರಾಜ್ಯಾಧ್ಯಕ್ಷರೂ ವುಧಾನಪರಿಷತ್ ಮಾಜಿ ಸದಸ್ಯರಾದ ಕೆ ಸಿ ಪುಟ್ಟಶೆಟ್ಟಿ ಅವರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಬೋರಪ್ಪ ಶೆಟ್ಟಿ, ರಾಜ್ಯ ಸದಸ್ಯರಾದ ಕೊಣಸೂರು ಶಿವರಾಜು, ಜಿಲ್ಲಾ ಕುಂಬಾರರ ಜಾಗೃತಿ ವೇದಿಕೆಯ ಮಹೇಶ್ ಮುಳ್ಳೂರು ಮತ್ತಿತರರು ಹಾಜರಿದ್ದರು.
