ಮೈಸೂರು: ನಗರದ ರಾಮ ವಿಲಾಸ ರಸ್ತೆಯಲ್ಲಿರುವ ಡಿ ಬನುಮಯ್ಯ ಪ್ರೌಢಶಾಲೆಯಲ್ಲಿ 35 ವರ್ಷ ಸೇವೆ ಸಲ್ಲಿಸಿದ ಹರೀಶ್ ಹೆಚ್ ಪಿ ಅವರು ವಯೋ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಹೃದಯಸ್ಪರ್ಶಿ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಯಿತು.
1994 ನೇ ಬ್ಯಾಚಿನ ಹಳೆ ವಿದ್ಯಾರ್ಥಿಗಳು
ಹರೀಶ್ ಹೆಚ್ ಪಿ ಅವರನ್ನು ಗೌರವಿಸಿ, ಸನ್ಮಾನಿಸಿ, ಆತ್ಮೀಯವಾಗಿ ಬಿಳ್ಕೊಡುಗೆ ನೀಡುವುದರ ಮೂಲಕ ತಮ್ಮ ನೆಚ್ಚಿನ ಮೇಷ್ಟ್ರಿಗೆ ಗುರುವಂದನೆ ಅರ್ಪಣೆ ಮಾಡಿದುದು ವಿಶೇಷವಾಗಿತ್ತು.
ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶ್ರಮಿಸಿದ ಶಿಕ್ಷಕನಿಗೆ ಹಬ್ಬದ ಮಾದರಿಯಲ್ಲಿ ಸನ್ಮಾನಿಸಿ, ಗೌರವಿಸಿ ಆತ್ಮೀಯ ಬಿಳ್ಕೊಡುಗೆ ನೀಡಿದರು.
ಸನ್ಮಾನ ಸ್ವೀಕರಿಸಿದ ಶಿಕ್ಷಕ ಹರೀಶ್ ಅವರು ಮಾತನಾಡಿ, ಹಳೆಯ ವಿದ್ಯಾರ್ಥಿಗಳು ಎಲ್ಲರೂ ಸೇರಿ ನನ್ನ ಸೇವೆಯನ್ನು ಸ್ಮರಿಸಿ ಸನ್ಮಾನ ಮಾಡುತ್ತಿರುವುದು ಬಹಳ ಸಂತಸ ತಂದಿದೆ ಎಂದು ಹೇಳಿದರು.
ಈ ತರಹದ ಗುರುತಿಸುವಿಕೆ ಯಾವ ಪ್ರಶಸ್ತಿಗೂ ಕಮ್ಮಿ ಇಲ್ಲ, ಈದಿನ ವಿಶೇಷವಾಗಿ ಈ ಹುಡುಗರ ತಂಡ ಸಮಾರಂಭೋತ್ಸವ ನಡೆಸಿ ಕಾರ್ಯಕ್ರಮಕ್ಕೆ ಬಂದವರಿಗೆ ಊಟದ ವ್ಯವಸ್ಥೆ ಸಹಿತ ಮಾಡಿದ್ದು ಸಮಾಜದಲ್ಲಿ ಶಿಕ್ಷಣ ಮತ್ತು ಶಿಕ್ಷಕನಿಗೆ ಗೌರವ ಕಡಿಮೆಯಾಗಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಎಲ್ಲರ ಪ್ರೀತಿಗೆ ನಾನು ಮತ್ತು ನನ್ನ ಕುಟುಂಬ ಚಿರಋಣಿ ಯಾಗಿದ್ದೇವೆ ಎಂದು ಹೃದಯ ತುಂಬಿ ಹೇಳಿದರು.
1994 ಬ್ಯಾಚಿನ ಹಳೆ ವಿದ್ಯಾರ್ಥಿ ಬಳಗದ ಎಸ್ ಎನ್ ರಾಜೇಶ್, ಎಂ ಆರ್ ಕಿಶೋರ್ ಕುಮಾರ್, ಎಸ್ ಪ್ರದೀಪ್ ಕುಮಾರ್, ಟಿ ವಿನೋದ್ ಕುಮಾರ್, ಏನ್ ಶ್ರೀಧರ್, ಎಸ್ ಸತೀಶ್, ಟಿ ಸಂಪತ್ ,ಶಾಂತರಾಮ್, ದೇವ , ಕುಮಾರ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಹಾಜರಿದ್ದರು.
