ಮೈಸೂರು: ಮೈಸೂರಿನ ನಂಜುಮಳಿಗೆ ವೃತ್ತದಲ್ಲಿ ಕೃಷ್ಣರಾಜ ಯುವ ಬಳಗದ ವತಿಯಿಂದ ಯುಗಾದಿ ಹಬ್ಬ ಹಾಗೂ ರಂಜಾನ್ ಹಬ್ಬದ ಅಂಗವಾಗಿ ಎರಡೂ ಸಮುದಾಯದವರು ಶುಭಾಶಯ ವಿನಿಮಯ ಮಾಡಿಕೊಂಡು ಮಾದರಿಯಾದರು.
ಹಿಂದೂ ಬಾಂಧವರು ಮುಸಲ್ಮಾನ್ ಬಾಂಧವರಿಗೆ,ಮುಸಲ್ಮಾನ್ ಬಾಂಧವರು ಹಿಂದೂಗಳಿಗೆ ಬೇವು ಬೆಲ್ಲ ತಿನ್ನಿಸಿ ಶುಭ ಹಾರೈಸಿದರು.
ಎರಡು ಸಮುದಾಯದವರು ಹಬ್ಬದ ಶುಭಾಶಯಗಳನ್ನು ವಿನಮಯ ಮಾಡಿಕೊಂಡರು.
ಈ ಸಂದರ್ಭದಲ್ಲಿ
ಪೊಲೀಸ್ ಬಾಂಧವರಿಗೂ ಬೇವು ಬೆಲ್ಲ ನೀಡಿ ಯುಗಾದಿ ಹಬ್ಬದ ಶುಭಾಶಯ ಕೋರಿದರು.
ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ,ಜಿ ರಾಘವೇಂದ್ರ,ತೀರ್ಥ ಕುಮಾರ್,
ಎಸ್ ಎನ್ ರಾಜೇಶ್,
ನಾಸಿರ್ ಪಾಶ,ಮೋಹಿಬೆ ಶರೀಫ್,ಮುನಾವರ್ ಪಾಷಾ,ಅನ್ಸರ್ ಪಾಷಾ,ಸನವುಲ್ಲಾ, ನವೀನ್ ಕೆಂಪಿ, ರವಿ ನದನ್,ಬಾಲರಾಜು,ಅನಂತರಾಜು ಮತ್ತಿತರರು ಶುಭಾಶಯ ಕೋರಿದರು.
