(ವರದಿ: ರಾಮಸಮುದ್ರ ಎಸ್..ವೀರಭದ್ರಸ್ವಾಮಿ)
ಚಾಮರಾಜನಗರ: ಚಾಮರಾಜನಗರದ ಸಂಚಾರ ಠಾಣೆ ಮುಖ್ಯ ಪೇದೆ ಮಲ್ಲು ಅವರನ್ನು ಕರ್ತವ್ಯ ಲೋಪ ಆರೋಪದ ಮೇರೆಗೆ ಅಮಾನತುಗೊಳಿಸಲಾಗಿದೆ.
ಮುಖ್ಯ ಪೇದೆ ಮಲ್ಲು ಅವರನ್ನು ಅಮಾನತುಪಡಿಸಿ
ಜಿಲ್ಲಾ ಎಸ್ಪಿ ಎಂ.ಮುತ್ತುರಾಜು ಅವರು ಆದೇಶ ಹೊರಡಿಸಿದ್ದಾರೆ.
ದ್ವಿ ಚಕ್ರ ವಾಹನ ಬಿಡುಗಡೆಗೊಳಿಸಲು ಸವಾರನಿಂದ ಲಂಚಕ್ಕೆ ಆಮೀಷವೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಶುಕ್ರವಾರ ಸಂಜೆ ಸಂಚಾರ ಠಾಣೆಗೆ ದಾಳಿ ನಡೆಸಿದ್ದರು.
ಈ ವೇಳೆ ಮಲ್ಲು ಕರ್ತವ್ಯಲೋಪ ಎಸಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬಂದ ಕಾರಣ ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.
