ಗುಂಡ್ಲುಪೇಟೆ: ಗುಂಡ್ಲುಪೇಟೆ, ಹೊಂಗಹಳ್ಳಿಯಲ್ಲಿ ಸುರೇಶ್ ಶ್ರುತಿ ದಂಪತಿ ನೂತನವಾಗಿ ಪ್ರಾರಂಭಿಸಿರುವ ಕೋಡಿ ಬಸವೆಶ್ವರ ನರ್ಸರಿ ಉದ್ಘಾಟನೆಯನ್ನು ಸೋಮಹಳ್ಳಿ ಮಠದ ನಿಯೋಜಿತ ಪೂಜ್ಯ ಬಸವಯೋಗಿ ಪ್ರಭು ಸ್ವಾಮೀಜಿ ನೆರವೇರಿಸಿದರು.
ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡಿ,ನಂತರ ಕೋಡಿ ಬಸವೇಶ್ವರ ನರ್ಸರಿ ನಾಮಫಲಕವನ್ನು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಬಸವಯೋಗಿಪ್ರಭು ಸ್ವಾಮೀಜಿ,ಪೈರಿಗೆ ಯಾವ ರೀತಿ ನೀರು ಗೊಬ್ಬರ ಹಾಕಿ ರಕ್ಷಣೆ ಮಾಡುತ್ತೇವೆಯೋ ಅದೇ ರೀತಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ಕೊಟ್ಟು ಪೋಷಿಸಬೇಕು ಎಂದು ಹೇಳಿದರು.
ಮನದ ಮೈಲಿಗೆಯನ್ನು ತೊಳೆಯಬೇಕಾದರೆ ಶರಣರ ಚಿಂತನೆ ಮಾಡಬೇಕು. ಗುರು ಲಿಂಗ ಜಂಗಮದ ಮೇಲೆ ಅಭಿಮಾನವಿರಬೇಕು ಎಂದು ತಿಳಿಹೇಳಿದರು.
ಈ ಸಂದರ್ಭದಲ್ಲಿ ಅಂಬಳೆ ಬಸವೇಶ್ವರ ನರ್ಸರಿ ಮಾಲೀಕರಾದ ಗಿರೀಶ್, ಸುರೇಶ್ ಶ್ರುತಿ, ಸಂವೇದ್, ಮಡಹಳ್ಳಿ ನಂಜಪ್ಪ ಗುಂಡ್ಲುಪೇಟೆ ಬಸವೇಶ್ವರ ಟ್ರೇಡರ್ಸ್ ಮಾಲೀಕರಾದ ಶಿವರಾಜ್, ಗೀತಮ್ಮ ಹೊಂಗಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.
