ಮೈಸೂರು: ಪಾರಸ್ ಪೃಥ್ವಿ ಜ್ಯುವೆಲರ್ಸ್ ವತಿಯಿಂದ ವಿಜಯನಗರದ ಕೊಡಗು ಗೌಡ ಸಮಾಜದಲ್ಲಿ ಜೂ.19ರಿಂದ 21ರವರೆಗೆ ಆಯೋಜಿಸಿರುವ ರಾಯಲ್ ಟ್ರೇಸರ್ ಚಿನ್ನ, ಬೆಳ್ಳಿ ವಸ್ತು ಪ್ರದರ್ಶನದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ವಿಜಯನಗರದ ಜಗನ್ನಾಥ ಶೈಣೈ ಭವನದಲ್ಲಿ ಪೋಸ್ಟರ್ ಅನ್ನು ವಿಶ್ರಾಂತ ಕುಲಪತಿ ಪ್ರೊ.ಪದ್ಮಾಶೇಖರ್ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ನಮ್ಮ ಅಸ್ಥಿತ್ವವನ್ನು ಭೂಮಿಯಲ್ಲದೇ ಬೇರೆಲ್ಲೂ ಇಡಲು ಸಾಧ್ಯವಿಲ್ಲ. ಅಂತಹ ಪೃಥ್ವಿ ಹೆಸರಿನ ಪ್ರದರ್ಶನ ಮಾಡುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.
ಹೇಮಾನಂದೀಶ್ ನಿರಂತರವಾಗಿ ಒಂದಿಲ್ಲೊಂದು ಕಾರ್ಯಕ್ರಮದಲ್ಲಿ ಸಂಚರಿಸುತ್ತಿರುತ್ತಾರೆ. ಅಂತಹವರು ರಾಜಕೀಯಕ್ಕೆ ಬರಬೇಕಿದೆ ಎಂದು ಹೇಳಿದರು.
ಚಿನ್ನದ ಬಳಕೆ ನಿನ್ನೆ ಮೊನ್ನೆಯದಲ್ಲ ಕಂಚಿನ ಯುಗದಿಂದಲೂ ಚಿನ್ನದ ಬಳಕೆಯ ಇತಿಹಾಸವನ್ನು ದಾಖಲೆಯಲ್ಲಿ ಗಮನಿಸಬಹುದಾಗಿದೆ, ಆಯಾ ಕಾಲಘಟಕ್ಕೆ ಅನುಗುಣವಾದ ಚಿನ್ನದ ಬಳಕೆ ಮಾಡುತ್ತಿದ್ದೇವೆ. ನಮ್ಮ ತನವನ್ನು ನಾವು ಉಳಿಸಿಕೊಳ್ಳಲು ಚಿನ್ನವನ್ನು ಉಳಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಕೊಡಗು ಸಮಾಜದಲ್ಲಿ ನಡೆಯುವ ಆಭರಣ ಪ್ರದರ್ಶನ ಮತ್ತು ಮಾರಾಟದಲ್ಲಿ ಟೆಂಪಲ್ ಜ್ಯುವಲರಿ, ಟರ್ಕಿ ಜ್ಯುವಲರಿ, ಫ್ಯೂಜನ್ ಜ್ಯುವಲರಿ, ಇಟಾಲಿಯನ್ ಜ್ಯುವಲರಿ ಸೇರಿ ೧೦ಕ್ಕೂ ಹೆಚ್ಚು ಬಗೆ ಹಾಗೂ ೬ಸಾವಿರ ವಿಧವಾದ ಆಭರಣಗಳ ಮಾರಾಟ ಇರಲಿದೆ.
ಪೃಥ್ವಿ ಜ್ಯುವೆಲರ್ಸ್ ನ ಸಂಸ್ಥಾಪಕ ಭದ್ರಿ, ಸಹ ಸಂಸ್ಥಾಪಕಿ ಭಾರ್ಗವಿ ಭದ್ರೀಶ್, ಕೊಳಲು ನಾಗರಾಜಪ್ಪ, ಹೇಮಾಲಕ್ಷ್ಮಣ್, ವೀಣಾ ಆಶೋಕ್, ಡಾ.ಯೋಗಿತ, ತೀರ್ಥಸ್ವಾಮಿ, ಪುಷ್ಕರಣಿ ಶಾಲೆಯ ಮುಖ್ಯಸ್ಥೆ ಸ್ವರೂಪಿಣಿ, ಉಷಾ ನರಸಿಂಹ, ಶೋಭಾ ರಮೇಶ್ ಇನ್ನಿತರರು ಉಪಸ್ಥಿತರಿದ್ದರು.
