ಮೈಸೂರು, ಅ.2: ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ಮೈಸೂರಿನ ಕೋರ್ಟ್ ಮುಂಭಾಗದಲ್ಲಿರುವ ಗಾಂಧಿ ಪ್ರತಿಮೆಗೆ ಜೆಡಿಎಸ್ ಮುಖಂಡರು ಹೂವಿನ ಅಲಂಕಾರ ಮಾಡಿದರು.
ನಂತರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮುಖಾಂತರ ಗೌರವ ಸಮರ್ಪಣೆ ಮಾಡಿ ಗಾಂಧಿ ಸ್ಮರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜೆ.ಡಿ.ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಮಂಜುನಾಥ್, ಮಾಜಿ ಮಹಾಪೌರರಾದ ಆರ್. ಲಿಂಗಪ್ಪ , ಜೆ.ಡಿ.ಎಸ್. ಮುಖಂಡ ಎಸ್ ಪ್ರಕಾಶ್ ಪ್ರಿಯಾದರ್ಶನ್, ಜೆ.ಡಿ.ಎಸ್. ಕಾರ್ಮಿಕ ಮುಖಂಡ ನಾಗರಾಜು ಹಾಗೂ ಬಾಲಕಿ ಹಾಜರಿದ್ದು ಗಾಂಧಿ ಪ್ರತಿಮೆಗೆ ನಮಿಸಿದರು.
